ವಂಚಕರು ವಾಟ್ಸಾಪ್ ಮೂಲಕ ಫೋಟೋ ಕಳುಹಿಸುತ್ತಾರೆ. ವಾಟ್ಸಾಪ್ ಇಮೇಜ್ ಸ್ಕ್ಯಾಮ್ ಎನ್ನುವುದು ಸೈಬರ್ ವಂಚನೆಯ ಒಂದು ರೂಪವಾಗಿದ್ದು,
ಈ ಫೋಟೋ ಸೈಗನೋಗ್ರಫಿ ಎಂಬ ಟೆಕ್ನಾಲಜಿ ಮೂಲಕ ಮಾಡಲಾದ ಗುಪ್ತ ದುರುದ್ದೇಶಪೂರಿತ ಲಿಂಕ್ ಹೊಂದಿರುತ್ತವೆ ಎಂದು ವರದಿ ಹೇಳಿದೆ.
ಈ ಟೆಕ್ನಾಲಜಿಯು ಡಿಜಿಟಲ್ ಫೈಲ್‌ಗಳಲ್ಲಿ ಡೇಟಾವನ್ನು ಮರೆಮಾಚುವ ವಿಧಾನವಾಗಿದೆ. ವ್ಯಕ್ತಿಯು ಫೋಟೋ ಡೌನ್‌ಲೋಡ್ ಮಾಡಿದಾಗ ಫೋನ್ ಕ್ರಾಶ್ ಆಗಬಹುದು, ಇದರಿಂದ ವಂಚಕರಿಗೆ OTP ಅಥವಾ UPI ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.ಇತ್ತೀಚೆಗೆ, ಈ ಸ್ಕ್ಯಾಮ್‌ಗೆ ವಂಚನೆಗೆ ಒಳಗಾದ ಮಧ್ಯಪ್ರದೇಶದ ವ್ಯಕ್ತಿ ಫೋಟೋ ಡೌನ್‌ಲೋಡ್ ಮಾಡಿದ ಬಳಿಕ ₹2 ಲಕ್ಷ ಕಳೆದುಕೊಂಡಿದ್ದಾನೆ.