ಅಗ್ರಾ :–
ಗರ್ಭಿಣಿಯರಿಗೆ ನೀಡಲಾಗುವ ಸಹಾಯಧನ ಹಣಕ್ಕಾಗಿ ಒಂದೇ ಮಹಿಳೆಗೆ 25 ಬಾರಿ ಹೆರಿಗೆ ಆಗಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದ್ದು, ಕೃಷ್ಣ ಎಂಬ ಮಹಿಳೆ ಹೆಸರಲ್ಲಿ 45 ಸಾವಿರ ಹಣವನ್ನು ಕ್ಲೈಮ್ ಮಾಡಿಕೊಳ್ಳಲಾಗಿದೆ
30 ತಿಂಗಳ ಅವಧಿಯಲ್ಲಿ ಗರ್ಭಿಣಿ 25 ಮಕ್ಕಳಿಗೆ ಜನ್ಮ ನೀಡೋಕೆ ಸಾಧ್ಯನಾ. ವಾಸ್ತವವಾಗಿ ಸಾಧ್ಯವಿಲ್ಲದಿದ್ದರೂ, ದಾಖಲೆಗಳಲ್ಲಿ ಸಾಧ್ಯವಾಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಆರೋಗ್ಯಾಧಿಕಾರಿಗಳ ಹಣದಾಹಕ್ಕೆ ಸ್ಪಷ್ಟ ಉದಾಹರಣೆ ಸಿಕ್ಕಿದ್ದು, ಕೇಂದ್ರದ ಸುರಕ್ಷಾ ಯೋಜನೆ ಹೆಸರಲ್ಲಿ ಹಣ್ಣನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ.
ಕೃಷ್ಣ ಕುಮಾರಿ ಎಂಬಾಕೆ ಕಳೆದ 8 ವರ್ಷಗಳ ಹಿಂದೆ ಫತೇಹಬಾದ್ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಆಕೆಯ ಹೆಸರನ್ನೇ ಬಳಸಿ 25 ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ.
ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಆಡಿಟ್ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ವಿಶೇಷವಾಗಿ SC/ST ಗರ್ಭಿಣಿ ಮಹಿಳೆಯರಿಗೆ ನೀಡಲಾಗುವ ಹಣವನ್ನು ಪಡೆಯಲು ಈ ರೀತಿ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.