ಮೋದಿ ಅಧಿಕಾರಕ್ಕೆ ಬಂದಾಗ 53.11 ಲಕ್ಷ ಕೋಟಿ ಸಾಲ ಇತ್ತು 10 ವರ್ಷದಲ್ಲಿ ದೇಶದಲ್ಲಿ 200 ಲಕ್ಷ ಕೋಟಿ ಸಾಲ ಆಗಿದೆ

ಬೆಳಗಾವಿ :–

ರಾಜ್ಯ ದಿವಾಳಿ ಆಗುತ್ತೆ ಎಂದು ಹೇಳಿದ್ದರು. ಆರ್ಥಿಕವಾಗಿ ದಿವಾಳಿ ಆಗಿದ್ದರೆ ಇದು ಸಾಧ್ಯ ಆಗುತ್ತಿತ್ತ,? ಮೋದಿ ಅಧಿಕಾರಕ್ಕೆ ಬಂದಾಗ 53.11 ಲಕ್ಷ ಕೋಟಿ ಸಾಲ ಇತ್ತು.

10 ವರ್ಷದಲ್ಲಿ ದೇಶದಲ್ಲಿ 200 ಲಕ್ಷ ಕೋಟಿ ಸಾಲ ಆಗಿದೆ. ದೇಶದ ಮೇಲೆ ಸಾಲ ಜಾಸ್ತಿ ಆಗಲು ಕಾರಣ ನರೇಂದ್ರ ಮೋದಿ ಎಂದು ಬೆಳಗಾವಿ ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಮುಖ್ಯ ಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಮುನ್ನೆಲೆಗೆ ಬಂದಿದೆ ಎಂದು ಬಿಜೆಪಿ ನಾಯಕರು ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಜಾತಿ ಗಣತಿ ಆಗಬೇಕು ಅಂತ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಆರ್ಥಿಕವಾಗಿ ಸಾಮಾಜಿಕವಾಗಿ ಏನಾಗಿದೆ ಗೊತ್ತಾಗಬೇಕು ಅಲ್ವಾ?

1931 ರಲ್ಲಿ ಜಾತಿಗಣತಿ ನಡೆದಿತ್ತು. ಸ್ವಾತಂತ್ರ್ಯ ಬಂದ ಮೇಲೆ ಆಗಲಿಲ್ಲ. ಶೇಕಡಾ 95 ರಷ್ಟು ಸರ್ವೆ ಆಗಿದೆ ಯಾವಾಗಲೂ 100% ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Share this post:

Leave a Reply

Your email address will not be published. Required fields are marked *