ಚಿಕ್ಕೋಡಿ :–
ಬಾಬಾ ಸಾಹೇಬ್ ಅಂಬೇಡ್ಕರ ಅವರು ಜನರಿಗೆ ಜೀವನದ ಹಲವು ಪ್ರಮುಖ ಪಾಠಗಳನ್ನು ಕಲಿಸಿದ್ದಾರೆ ಬಾಬಾ ಸಾಹೇಬ್ ಅಂಬೇಡ್ಕರ್ ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಯಾವುದೇ ವ್ಯಕ್ತಿ ಸಮಾಜದಲ್ಲಿ ಯಶಸ್ಸನ್ನು ಸಾಧಿಸಬಹುದು ಬಾಬಾ ಸಾಹೇಬರ ಈ ಚಿಂತನೆಗಳು ಇಂದಿಗೂ ಕೋಟ್ಯಂತರ ಜನರಿಗೆ ಸ್ಪೂರ್ತಿಯ ಮೂಲವಾಗಿದೆ ಎಂದು ಚೌಸಾನ್ ಶಿಕ್ಷಣ ಸಂಸ್ಥೆಯ ಸದಸ್ಯರಾದ ಮಲ್ಲಿಕಾ ಎಸ್ ಚೌಗುಲೆ ಹೇಳಿದರು
ಇತ್ತೀಚಿಗೆ ಚೌಸಾನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಡಾ ಬಿ ಆರ್ ಅಂಬೇಡ್ಕರ್ ಅವರ 134ನೆಯ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ಸಮಾನತೆ ತತ್ವ ಬೋಧಿಸಿದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮಹಾನ್ ಮಾನವತವಾದಿ ಅಹಿಂಸಾ ಪ್ರತಿಪಾದಕರು ಸಂವಿಧಾನದಲ್ಲಿ ಅದು ಉಸಿರಾಗಿರುವಂತೆ ನೋಡಿಕೊಂಡರು ಜಾತಿ ಮತ ಧರ್ಮ ನಿರಪೇಕ್ಷ ಮನೋಧರ್ಮದ ಹೊಸ ಅರಿವಿನ ಬೀಜ ಬಿತ್ತಿದವರು. ಡಾಕ್ಟರ್ ಅಂಬೇಡ್ಕರ್ ಅವರ ಜೀವನ ಕಥೆ ಅಸಾಧಾರಣವಾಗಿದೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರು ಅನೇಕ ಕಷ್ಟಗಳನ್ನು ಎದುರಿಸಿದರು
ಆದರೆ ಆ ಹೋರಾಟಗಳು ಅವರನ್ನು ವ್ಯಾಖ್ಯಾನಿಸಲು ಅವರು ಎಂದಿಗೂ ಬಿಡಲಿಲ್ಲ ಬದಲಾಗಿ ಅವರು ಶಿಕ್ಷಣವನ್ನು ತಮ್ಮ ಶಕ್ತಿ ಮತ್ತು ಮಾರ್ಗದರ್ಶಕ ಬೆಳಕಾಗಿ ಪರಿವರ್ತಿಸಿದರು. ಅಂಬೇಡ್ಕರ್ ಜಯಂತಿ ಎಂದು ಅವರನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲ ಅವರಿಂದ ಸ್ಪೂರ್ತಿ ಪಡೆಯೋಣ ಡಾ. ಅಂಬೇಡ್ಕರ್ ಅವರ ಹೋರಾಟದಿಂದ ನಾಯಕತ್ವದವರೆಗಿನ ಪ್ರಯಾಣವು ಆಕಸ್ಮಿಕವಾಗಿರಲಿಲ್ಲ ಅದು ಪ್ರಯತ್ನ ಕಲಿಕೆ ಮತ್ತು ಸಮಾನ ಅಧಿಕಾರದಲ್ಲಿ ಬಲವಾದ ನಂಬಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ ಪ್ರಾಮಾಣಿಕತೆ ದೈರ್ಯ ಮತ್ತು ಬದಲಾವಣೆಯನ್ನು ತರುವ ಬದ್ಧತೆಯೊಂದಿಗೆ ಅವರ ಹೆಜ್ಜೆ ಗುರುತುಗಳಲ್ಲಿ ನಡೆಯೋಣ ಎಂದರು.
ನೆನಪಿಡಿ ಶಿಕ್ಷಕರು ಕೇವಲ ಪಠ್ಯಕ್ರಮವನ್ನು ಒಳಗೊಳ್ಳುವ ವ್ಯಕ್ತಿಯಲ್ಲ ನಿಜವಾದ ಶಿಕ್ಷಕರು ಬದಲಾವಣೆಗೆ ಪ್ರೇರಣೆ ನೀಡುತ್ತಾರೆ. ಕನಸುಗಳನ್ನು ನಿರ್ಮಿಸುತ್ತಾರೆ ಮತ್ತು ಸಮಾಜವನ್ನು ಉನ್ನತಿಕರಿಸುತ್ತಾರೆ ಆ ನಿಟ್ಟಿನಲ್ಲಿ ತಾವೆಲ್ಲರೂ ಯೋಚಿಸಬೇಕೆಂದು ಪ್ರ ಶಿಕ್ಷಣಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ . ಕನಕಾಚಲ ಕನಕಗಿರಿ ಪ್ರಾಸ್ತಕವಾಗಿ ಮಾತನಾಡಿದರು.
ಪ್ರೊ. ಸುಜಾತಾ ಚಂದ್ಗಡೆ, ಎಂ.ಎಚ್ ರಾವುತ್, ಚೌಸನ್ ನರ್ಸರಿ ಶಾಲೆಯ ಶಿಕ್ಷಕಿಯರಾದ ಕವಿತಾ, ಆಸ್ಮಾ ಜಮಾದಾರ್ ಪ್ರಶಾಂತ್ ಪತ್ತಾರ್ ಇನ್ನಿತರರು ಉಪಸಿದ್ಧರಿದ್ದರು.
ಅನಿತಾ ಪೊದ್ಧಾರ ಪ್ರಾರ್ಥಿಸಿದರು. ಐಶ್ವರ್ಯ ನಾವಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕರಾದ ಡಾ: ಎನ್.ಎಸ್. ಶಿಂದೆ ವಹಿಸಿದ್ದರು.
ಪ್ರಶಿಕ್ಷಣಾರ್ಥಿಯಾದ ಮಲಕಾರಿ ಮಸಾರಗುಪ್ಪಿ ಕಾರ್ಯಕ್ರಮ ನಿರೂಪಿಸಿದರು, ದೀಪ ಹೊಂಕಳಿ ವಂದಿಸಿದರು.