ಧಮನಿತರ ಧ್ವನಿಯಾದ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ವಿಚಾರಗಳು ಪ್ರತಿಯೊಬ್ಬರ ಅಂತರಾಳದ ಹೃದಯದಲ್ಲಿಟ್ಟು ಅವರು ಹಾಕಿ ಕೊಟ್ಟಿರುವ ದಾರಿಯಲ್ಲಿ ನಡೆಯಬೇಕು

ಚಿಕ್ಕೋಡಿ :–

ಬಡತನವನ್ನು ಮೆಟ್ಟಿ ನಿಂತು ಧಮನಿತರ ಧ್ವನಿಯಾದ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ವಿಚಾರಗಳು ಪ್ರತಿಯೊಬ್ಬರ ಅಂತರಾಳದ ಹೃದಯದಲ್ಲಿಟ್ಟು ಅವರು ಹಾಕಿ ಕೊಟ್ಟಿರುವ ದಾರಿ ದೀಪದಲ್ಲಿ ನಡೆದರೆ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬಹುದೆಂದು ಉಪನ್ಯಾಸ ಸಾಹಿತಿಗಳಾದ ಎಮ್.‌ ಎಸ್.‌ ನಡುಗೇರಿ ಸಮುದಾಯಕ್ಕೆ ಕರೆ ನೀಡಿದರು.

ಚಿಕ್ಕೋಡಿ ಸಮೀಪದ ಧುಳಗನವಾಡಿಯಲ್ಲಿ ಕಳೆದ ಏಪ್ರೀಲ್‌ 14 ರಂದು ರಂಗದರ್ಶನ ಗ್ರಾಮೀಣ ವಿಕಾಸ ಸಂಘ, ಧುಳಗನವಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ 134ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಅತಿಥಿ ಉಪನ್ಯಾಸ ನೀಡಿ ಮಾತನಾಡಿ, ಕಟ್ಟ ಕಡೆಯ ಕಲಾವಿದರನ್ನು ಗುರುತಿಸಿ ಅವರ ವೇದಿಕೆ ನೀಡಿ ಕಲೆ ಕಲಾವಿದನನ್ನು ಬೆಳೆಸುವುದು ನಾಡಿನ ಸಂಸ್ಕೃತಿ ಕಲೆ ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದರು.

ಅತಿಥಿಗಳಾಗಿ ಆಗಮಿಸಿದ ಗ್ರಾ.ಪಂ ಸದಸ್ಯೆ ವೈಶಾಲಿ ಸಂತೋಷ ಕಮತೆ ಇವರು ಮಾತನಾಡಿ ಡಾಮಹಿಳೆಯರಿಗೆ ಸಮಾಜದಲ್ಲಿ ಸಾಂವಿಧಾನಿಕ ಹಕ್ಕು ನೀಡಿದವರು ಡಾ. ಬಾಬಾಸಾಹೇಬ ಅಂಬೇಡ್ಕರರವರು. ಪುಣ್ಯ ಭಾರತ ದೇಶದಲ್ಲಿ ಹುಟ್ಟಿದ್ದು ನಮ್ಮೆಲ್ಲರ ಸುದೈವ ಎಂದರು. ಗ್ರಾ. ಪಂ ಉಪಾಧ್ಯಕ್ಷರಾದ ಲಕ್ಷ್ಮಣ ಮ. ಮಾದರ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನಾಗರಾಳದ ಸಾಮಾಜಿಕ ಕಾರ್ಯಕರ್ತರಾದ ಸುಭಾಷ ಅ. ಸನದಿ, ಹಾಗೂ ಚಿಂಚಣಿಯ ಭಜನಾ ಕಲಾವಿದ ಕಲ್ಲಪ್ಪಾ ತು. ಮಾಳಗೆ ಇವರಿಗೆ “ಧಮ್ಮ ಚಕ್ರ ಭಿಮ ರತ್ನ”-2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಳಪ್ಪಾ ಖೋತ, ಸಿದ್ದಗೌಡ ಕಮತೆ, ಅಪ್ಪಾಸಾಬ ಚಿಮನೆ, ಉಪಸ್ಥಿತರಿದ್ದರು. ನಂತರ ವಿವಿಧ ಕಲಾತಂಡಗಳಿಂದ ವೈವಿಧ್ಯ ಸಾಂಸ್ಕೃತಿಕ ಕಲಾಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.ಪ್ರಾಸ್ತಾವಿಕವಾಗಿ ಭರತ ಕಲಾಚಂದ್ರ ಮಾತನಾಡಿದರು. ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು, ಮಾರುತಿ ಕಾಮಗೌಡ ಸ್ವಾಗತಿಸಿ, ವಂದಿಸಿದರು.

Share this post:

Leave a Reply

Your email address will not be published. Required fields are marked *