ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರ ಶ್ರೀ ಅನ್ನಪೂರ್ಣೇಶ್ವರಿ ಫೌಂಡೇಷನ್ ವತಿಯಿಂದ ಮತಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ, ಸದಲಗಾ, ಯಕ್ಸಂಬಾ, ಕೇರೂರ, ಖಡಕಲಾಟ ದಲ್ಲಿರುವ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 3 ಲಕ್ಷ ರೂ. ಗೂ ಹೆಚ್ಚು ಮೊತ್ತದ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಚಿಕ್ಕೋಡಿ ಪಿಯು ಕಾಲೇಜಿನ ಪ್ರಾಚಾರ್ಯ ಎಮ್ ಜಿ ತಾವದಾರೆ, ಯಕ್ಸಂಬಾ ಪ್ರಾಚಾರ್ಯ ಟಿ ಬಿ ವರಾಳೆ, ಕೇರೂರಿನ ಎಮ್ ಆರ್ ಬಾಗಾಯಿ, ಖಡಕಲಾಟನ ರಾಜೇಂದ್ರ ಖೇಲೇಕರ, ಸದಲಗಾದ ಎ ಬಿ ಸುತಾರ ಅವರು ಅನ್ನಪೂಣೇಶ್ವರಿ ಫೌಂಡೇಷನ್ ವತಿಯಿಂದ ವಿತರಣೆ ಮಾಡಲಾದ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪಠ್ಯಪುಸ್ತಕಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಚಿಕ್ಖೊಡಿಯ ಪಿಯು ಕಾಲೇಜಿನ ಪ್ರಾಚಾರ್ಯ ಅವರು ಮಾತನಾಡಿ, ಸೋನಾಕ್ಷಿ ಹುಕ್ಕೇರಿ ಅವರ ಜನ್ಮ ದಿನದ ಅಂಗವಾಗಿ ಶಾಸಕ ಗಣೇಶ ಹುಕ್ಕೇರಿ ಅವರು ಕ್ಷೇತ್ರದ ಐದು ಸರ್ಕಾರಿ ಪಿಯು ಕಾಲೇಜಿನ ಸಹಸ್ರಾರು ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ” ಎಂದರು.
ಅನ್ನಪೂರ್ಣೇಶ್ವರಿ ಫೌಂಡೇಷನ್ ನ ಉಪಾಧ್ಯಕ್ಷೆ ಅಶ್ವಿನಿ ರಾಜು ಸೊಲ್ಲಾಪೂರೆ ಅವರು ಮಾತನಾಡಿ, ಅನ್ನಪೂರ್ಣೇಶ್ವರಿ ಫೌಂಡೇಷನ್ ಚಿಕ್ಕೋಡಿ ಅಷ್ಟೇ ಅಲ್ಲದೇ, ಬೆಳಗಾವಿ ನಗರ, ಗ್ರಾಮೀಣ ಭಾಗ ಸೇರಿದಂತೆ ಹಲವು ಕಡೆಗೆ ತನ್ನ ಸಾಮಾಜಿಕ ಚಟುವಟಿಕೆಗಳ ಮೂಲಕ ನೊಂದವರ ಧ್ವನಿಯಾಗಿದ್ದು, ಇದಕ್ಕೆ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಪ್ರೋತ್ಸಾಹ ಸಾಕಷ್ಟು ಇದೆ” ಎಂದರು.
ಅಷ್ಟೇ ಅಲ್ಲದೇ, ಹಿರೇಕೋಡಿ ಗ್ರಾಮದ ಸಾರ್ವಜನಿಕ ಗ್ರಂಥಾಲಯಗಳು ಸೇರಿದಂತೆ ಹಲವು ಗ್ರಂಥಾಲಯಗಳಿಗೆ ಸಾಮಾನ್ಯ ಜ್ಞಾನ ಕುರಿತಾದ ಪುಸ್ತಕಗಳನ್ನು ಕೂಡ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿಯ ಕಾಲೇಜು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಚಿದಾನಂದ ನೊಗಿನಿಹಾಳ, ಪ್ರಾಚಾರ್ಯರುಗಳಾದ ಎಮ್ ಜಿ ತಾವದಾರೆ, ಟಿ ಬಿ ವರಾಳೆ, ಎಮ್ ಆರ್ ಬಾಗಾಯಿ, ರಾಜೇಂದ್ರ ಖೇಲೇಕರ, ಎ ಬಿ ಸುತಾರ, ಡಿಡಿಪಿಯು ಕಚೇರಿಯ ಅಧಿಕಾರಿ ರೂಪೇಶ, ರಾಜು ಸೊಲ್ಲಾಪುರೆ, ಪ್ರೋ ಎನ್ ಎಸ್ ಕುರುಬರ ಮುಂತಾದವರು ಇದ್ದರು. ಪ್ರೋ ಎ ಬಿ ಡೊಂಗರಕೆ ಸ್ವಾಗತಿಸಿದರು. ಎಮ್ ಎನ್ ವಾಕಪಟೆ ನಿರೂಪಿಸಿದರು. ಪ್ರೋ ಎಮ್ ಆರ್ ಅರಕೆರೆ ವಂದಿಸಿದರು.
+ There are no comments
Add yours