ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಸ್ಥಳೀಯ ಚಿದಾನಂದ ಸಿ. ಬಿ. ಕೋರೆ ತಾಂತ್ರೀಕ ಮಹಾವಿಧ್ಯಾಲಯದ ಚಿಕ್ಕೋಡಿಯಲ್ಲಿ ೨೦೨೩-೨೪ ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಇಂಡಕ್ಷನ್ ಪ್ರೊಗ್ರಾಂ ಅಂಗವಾಗಿ ೫ನೇ ದಿನದ ಕಾರ್ಯಕ್ರಮ ದಲ್ಲಿ ಸಭ್ಯತೆಯು ಏಕಾಗ್ರತೆಗೆ ಪ್ರಮುಖವಾಗಿದ್ದು, ವಿದ್ಯಾರ್ಥಿಗಳ ಅಸಹಾಯಕತೆಯ ಹಣೆಪಟ್ಟಿಯಿಂದ ಹೊರಬಂದು ಅಸಾದ್ಯವಾದ್ದದನ್ನು ನಿರಂತರ ಪರಿಶ್ರಮದಿಂದ ಮಾತ್ರ ಸಾಧಿಸಲು ಸಾಧ್ಯ ಎಂದು ಸುಮಾರು ನಾಲ್ಕನೂರು ವಿಧ್ಯಾರ್ಥಿಗಳಿಗೆ ಶ್ರೀ. ಮೋಕ್ಷಾತ್ಮಾನಂದಜೀ ಮಹಾರಾಜ ರಾಮಕೃಷ್ಣ ಮೀಷನ್, ಬೆಳಗಾವಿ ಸ್ವಾಮೀಜಿಯವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಪ್ರೋ. ದರ್ಶನಕುಮಾರ ಬಿಳ್ಳೂರರವರು ಇಂಡಕ್ಷನ್ ಪ್ರೊಗ್ರಾಂದ ಮಹತ್ವ ಮತ್ತು ವಿದ್ಯಾರ್ಥಿಗಳು ಎಲ್ಲಾ ಅಯಾಮಗಳಲ್ಲಿ ಸಕಾರಾತ್ಮಕ ಪರಿವರ್ತನೆಗೊಳಿಸುವ ಚÀಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಿದರು. ಭೋದಕ ಸಿಬ್ಬಂದಿಗಳಾದ ಪ್ರೋ. ನಾವಿರವರು ಅತಿಥಿ ಪರಿಚಯ ಮಾಡಿದರು, ಪ್ರೋ. ಪದ್ಮಾ ಮಾಳಿಯವರು ನಿರೂಪಿಸಿದರು. ಇನ್ನು ೧೫ ದಿನಗಳ ಕಾಲ ಇಂಡಕ್ಷನ್ ಪ್ರೊಗ್ರಾಂ ೨೦೨೩-೨೪ ಹಮ್ಮಿಕೊಳ್ಳಲಾಗಿದೆ.
+ There are no comments
Add yours