ಕಮತೇನಟ್ಟಿ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಏಪ್ರಿಲ್.19 ರಿಂದ ಏಪ್ರಿಲ್.21ರ ವರೆಗೆ ವಿಜೃಂಭಣೆಯಿಂದ ನಡೆಯಿತು

ಚಿಕ್ಕೋಡಿ :–

ತಾಲೂಕಿನ ಕಮತೇನಟ್ಟಿ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಏಪ್ರಿಲ್.19 ರಿಂದ ಏಪ್ರಿಲ್.21ರ ವರೆಗೆ ವಿಜೃಂಭಣೆಯಿಂದ ನಡೆಯಿತು.

ಏಪ್ರಿಲ್‌ 19 ರಂದು ರಾತ್ರಿ 09 ಗಂಟೆಗೆ ಹರದೇಶಿ-ನಾಗೇಶಿ ಡೊಳ್ಳಿನ ಪದಗಳು ಜರುಗಿದವು. ಏ.20ರಂದು ಮುಂಜಾನೆ ಮಾರುತಿ ದೇವಾಸ್ಥಾನದಿಂದ ಪ್ರಾರಂಭವಾದ ಪಲ್ಲಕ್ಕಿ ಉತ್ಸವವು ಸಕಲ ಡೋಳು ವಾದ್ಯಗಳೊಂದಿಗೆ ಬಂಡಾರ ಎರಚುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದೇಶ್ವರ ದೇವಸ್ಥಾನದಲ್ಲಿ ಕೊನೆಗೊಂಡಿತು.

ಜಾತ್ರೆಯಲ್ಲಿ ಗ್ರಾಮದ ಭಕ್ತರು ದೇವರಿಗೆ ಹೂವು-ಭಂಡಾರ ಹಾರಿಸಿ, ಟೆಂಗಿನಕಾಯಿ ಕರ್ಪೂರ ಅರ್ಪಿಸಿ ತಮ್ಮ ಹರಕೆ ತಿರಿಸಿದರು. ಮಧ್ಯಾಹ್ನ ಮಹಾಪ್ರಸಾದ ಸೇವಿಸಿ ದೇವರದರ್ಶನ ಪಡೆದು ಪುನೀತರಾದರು. ರಾತ್ರಿ 10.00 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಿತು.

ಏ.21ರಂದು ಸಂಜೆ ಜಂಗಿ ಕುಸ್ತಿಗಳು ನಡೆದವು ಹಾಗೂ ರಾತ್ರಿ 10 ಗಂಟೆಗೆ ಶ್ರೀ ಸಿದ್ದೇಶ್ವರ ನವತರುಣ ನಾಟ್ಯ ಸಂಘ ಕಲಾವಿದರ ಬಳಗ ಕಮತೇನಟ್ಟಿ ಇವರಿಂದ ಭವ್ಯರಂಗ ಮಂಟಪದಲ್ಲಿ ದಿಲ್ಲಿ ಹೊಕ್ಕ ಪುಂಡ ಹುಲಿ ಎಂಬ ಸಾಮಾಜಿಕ ನಾಟಕ ನಡೆಯಿತು.

Share this post:

Leave a Reply

Your email address will not be published. Required fields are marked *