ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಜಿಲ್ಲಾ ಪಂಚಾಯತ ಬೆಳಗಾವಿ ತಾಲೂಕ ಪಂಚಾಯತ ನಿಪ್ಪಾಣಿ ಆಯ್ದ ಗ್ರಾಮ ಪಂಚಾಯತ ಸಹಯೋಗದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿನಾಟಕ ಜಾಗೃತಿ ಕಲಾ ಜಾಥಾ ಸೆಂಡೂರ,ಅಪ್ಪಾಚಿವಾಡಿ, ಕುರ್ಲಿ, ಶಿರಗುಪ್ಪಿ, ಕಾರದಗಾ, ಡೋನೆವಾಡಿ, ಮಾನಕಾಪೂರ, ಕೋಗನೋಳ್ಳಿ ವಿವಿಧ ಗ್ರಾಮಗಳಲ್ಲಿ ರಂಗದರ್ಶನ ಕಲಾತಂಡ ಹಾಗೂ ಡಾ.ಅಂಬೇಡ್ಕರ ನಾಟಕ ಕಲಾತಂಡದವರು
ನನ್ನ ಕೂಲಿ ನನ್ನ ಹಕ್ಕು ಬೀದಿನಾಟಕ ಜಾಗೃತಿ ಹಾಡುಗಳ ಮುಖಾಂತರ ಹೆಣ್ಣು ಗಂಡು ತಾರತಮ್ಯವಿಲ್ಲದ ಸಮಾನ ಕೂಲಿ ಸಮಾನ ವೇತನ ಕಾರ್ಮಿಕರು ಗುಳೆ ಹೊಗುವದನ್ನು ನಿಲ್ಲಿಸಿ ತಮ್ಮ ಊರಲ್ಲಿ ಕೆಲಸ ಮಾಡುವ ಮಹತ್ತರ ಯೋಜನೆ ಕುರಿತು ಕಲಾತ್ಮಕವಾಗಿ ಪ್ರದರ್ಶನ ನೀಡಿ ಗ್ರಾಮಸ್ತರಿಗೆ ಅರಿವು ಮೂಡಿಸಿದರು
ಶಶಿಕಾಂತ ಜೋರೆ ಐ.ಇ.ಸಿ ಸಂಯೋಜಕರು ನಿಪ್ಪಾಣಿ ಗ್ರಮ ಪಂಚಾಯತ ಜನ ಪ್ರತಿನಿಧಿಗಳು ಸಿಬಂದ್ದಿ ವರ್ಗ ಉಪಸ್ಥಿತರಿದ್ದರು ಬೀದಿನಾಟಕ ತಂಡದಲ್ಲಿ ಭರತ ಕಲಾಚಂದ್ರ, ಮಾರುತಿ ಕಾಮಗೌಡಾ, ಪ್ರಕಾಶ ಜನಮಟ್ಟಿ, ಪುಂಡಲೀಕ ನಾಯಿಕ, ಮಾರುತಿ ಕಮತೆ, ಶಂಕರ ಖೋತ, ಮಹೇಶ ಪಕಾಲೆ, ಸುಜಾತ ಮಗದುಮ್ಮ ಸಾವಿತ್ರಿ ಹಳಕಲ್ಲ ಭಾಗವಹಿಸಿದರು.
+ There are no comments
Add yours