“ಬೆಳಗಾವಿ ನಗರದಲ್ಲಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ನಗರದಲ್ಲಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ, ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಪತ್ರಿಕಾಗೋಷ್ಠಿ ನಡೆಸಿ ಬಳಿಕ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ರೈತ ದೇಶದ ಬೆನ್ನೆಲುಬು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಜನವಿರೋಧಿ ನೀತಿ ಅನುಸರಿಸುತ್ತಿದೆ. ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ರೈತರು, ಅವರ ಮಕ್ಕಳು ಮತ್ತು ಕುಟುಂಬಗಳಿಗೆ ಹಲವಾರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಎರಡೇ ತಿಂಗಳಲ್ಲಿ ಈ ಎಲ್ಲ ಯೋಜನೆಗಳನ್ನು ಮುಚ್ಚಿ ಹಾಕಿದೆ.ಇದರಿಂದ ರೈತರಿಗೆ ಘೋರ ಅನ್ಯಾಯವಾಗಿದೆ. ಅದರಲ್ಲಿ ಪ್ರಮುಖವಾದ್ದದ್ದು ಕಿಸಾನ ಸಮ್ಮಾನ ಯೋಜನೆ, ಎಪಿಎಂ ಕಾನೂನು ರದ್ದು,ರೈತ ಮಕ್ಕಳ ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಭೂಸಿರಿ ಕ್ಷೀರ ಸಮೃದ್ಧಿ ಬ್ಯಾಂಕ್‌, ಜೀವನ್ ಜ್ಯೋತಿ ವಿಮಾ ಯೋಜನೆ, ರೈತ ಸಂಪದ ಯೋಜನೆ, ಸಹಸ್ರ ಸರೋವರ ಮತ್ತು ಸಹ್ಯಾದ್ರಿ, ಸಿರಿ ಯೋಜನೆ, ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್, ಕನಿಷ್ಠ ಬೆಂಬಲ ಬೆಲೆ ಯೋಜನೆಗಳನ್ನು ಕೈಬಿಟ್ಟಿದೆ.

ಸರ್ಕಾರ ಈ ಯೋಜನೆಗಳನ್ನು ಪುನರಾರಂಭಿಸಿದಿದ್ದರೆ ರಾಜ್ಯಾದಾದ್ಯಂತ ಬಿಜೆಪಿಯಿಂದ ಉಗ್ರ ಹೋರಾಟ ನಡೆಸಲಾಗುವುದು.
ಇದಲ್ಲದೆ ಅವೈಜ್ಞಾನಿಕ ವಿದ್ಯುತ್‌ ದರ ಏರಿಕೆ ಮೂಲಕ ರೈತರು ಅವಲಂಬಿತವಾಗಿರುವ ಹತ್ತಿ ಉದ್ಯಮ, ರೈಸ್ ಮಿಲ್ ಮತ್ತು ವಿಧ್ಯುತ ಚಾಲಿತ ಮಗ್ಗಳಿಗೆ ವಿದ್ಯುತ್ ಬಿಲ್ ನ್ನು ಕಡಿಮೆ ಮಾಡಿ,ರೈತ ವಿರೋಧಿ ನಿರ್ಧಾರಗಳನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಉಜ್ವಲಾ ಬಡವನಾಚೆ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ದುಂಡಪ್ಪ ಬೆಂಡವಾಡೆ, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ. ರಾಜೇಶ ನೇರ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ, ಮಾಜಿ ಹಾಲಿ ಶಾಸಕರು, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours