“ಎಂಪಿ ಟ್ರೋಪಿ ಕಬ್ಬಡಿ ಪಂದ್ಯಾವಳಿಗೆ ಅಭೂತಪೂರ್ವ ಬೆಂಬಲ”- ಅಣ್ಣಾಸಾಹೇಬ ಜೊಲ್ಲೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಎಂಪಿ ಟ್ರೋಪಿ ಕಬ್ಬಡಿ ಪಂದ್ಯಾವಳಿಗೆ ಅಭೂತಪೂರ್ವ ಬೆಂಬಲ

ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹಕ್ಕೆ ನಿರಂತರ ಪ್ರಯತ್ನ- ಜೊಲ್ಲೆ

ಚಿಕ್ಕೋಡಿ: ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರ್ತಿಸಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ  ಕಳೆದ ಎರಡು ತಿಂಗಳಿಂದ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ ಮತ್ತು ಮಹಿಳೆಯರ ಕಬ್ಬಡಿ ಪಂದ್ಯಾವಳಿ ಅಯೋಜಿಸಲಾಗಿದೆ. ಪಂದ್ಯಾವಳಿಗೆ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಇಲ್ಲಿನ ಕಿವಡ ಮೈದಾನದಲ್ಲಿ ನಡೆದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ಎಂಪಿ ಟ್ರೋಫಿ ಕಬ್ಬಡಿ ಪಂದ್ಯಾವಳಿಯ ಗ್ರ್ಯಾಂಡ ಪಿನಾಲೆ ಉದ್ಘಾಟಿಸಿ ಅವರು ಮಾತನಾಡಿದರು.ಜೊಲ್ಲೆ ಗ್ರುಪ್ ಒಂದಿಲ್ಲೊಂದು ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿರುತ್ತದೆ ಎಂದರು.

ಕ್ರೀಡೆ. ಸಾಂಸ್ಕೃತಿಕ ಹೀಗೆ ಹತ್ತು ಹಲವು ಕಾರ್ಯಕ್ರಮ ಪ್ರತಿ ವರ್ಷ ನಡೆಸುವ ಚಿಂತನೆ ಮಾಡಲಾಗಿದೆ ಎಂದರು.

ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ ಮಾತನಾಡಿ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕ್ರೀಡೆ ಅವಶ್ಯಕವಾಗಿದೆ. ಇಂತಹ ಕ್ರೀಡೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಮಾತನಾಡಿ. ಸದೃಡ ಸಮಾಜ ನಿರ್ಮಾಣ ಮಾಡಲು ಆರೋಗ್ಯ ಮುಖ್ಯ. ಜೊಲ್ಲೆ ಪರಿವಾರ ಗ್ರಾಮೀಣ ಕ್ರೀಡೆ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಸಾನಿದ್ಯ ವಹಿಸಿದ್ದ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ವಹಿಸಿದ್ದರು.

ವೇದಿಕೆ ಮೇಲೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ. ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ. ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ. ಅಜಯ ಕವಟಗಿಮಠ. ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ. ಅಪರ ಸರ್ಕಾರಿ ವಕೀಲ ರಾಜು ಖೋತ. ಜ್ಯೋತಿಪ್ರಸಾದ ಜೊಲ್ಲೆ. ದೀಪಕ ಪಾಟೀಲ. ಅಶೋಕ ಹರಗಾಪೂರೆ. ನಾಗರಾಜ ಮೇಧಾರ. ಸಂಜು ಅರಗೆ. ಪ್ರಭು ಡಬ್ಬನ್ನವರ. ರಾಜು ಡೋಂಗರೆ. ವಿಶ್ವಹಿಂದು ಪರಿಷತ್ ವಿಠ್ಠಲ ಮಾಳಿ. ಅಮಿತ ಮಗದುಮ್ಮ. ಕಾಶಿನಾಥ ಕುರಣಿ.  ಮುಂತಾದವರು ಇದ್ದರು.

ಸಂಜಯ ಪಾಟೀಲ ಸ್ವಾಗತಿಸಿದರು.ರಮೇಶ ಪಾಟೀಲ ನಿರೂಪಿಸಿದರು. 


Share with Your friends

You May Also Like

More From Author

+ There are no comments

Add yours