ಚಿಕ್ಕೋಡಿ :–
ಜೊಲ್ಲೆ ಎಜ್ಯಕೇಶನ್ ಸೊಸಾಯಟಿಯ, ವಿವಿಧ ಅಂಗ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆ ವಾರ್ಷಿಕ ಸಿಬ್ಬಂದಿ ಸಭೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕರ‍್ಯಾಗಾರದ ಉದ್ಘಾಟನೆಯನ್ನು ಶಶಿಕಲಾ ಜೊಲ್ಲೆ ನಿಪ್ಪಾಣಿ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ನೇರವೆರಿಸಿ, ಮಾತನಾಡಿ ಇವತ್ತಿನ ದಿನಮಾನಗಳಲ್ಲಿ ಇಂತಹ ಸಿಬ್ಬಂದಿ ಸಭೆಗಳ ಆಯೋಜನೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕರ‍್ಯಾಗಾರ ಆಯೋಜನೆ ಅತ್ಯಂತ ಅವಶ್ಯಕವಾಗಿದೆ.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಶಿಕ್ಷಕರು ಸಮಯಪ್ರಜ್ಞೆ, ಪ್ರಾಮಾಣಿಕತೆ, ನಿಷ್ಠೆ ಇತ್ಯಾದಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಮಾಡಿದರೆ ಮಕ್ಕಳು ವೈಯಕ್ತಿಕವಾಗಿ ಬೆಳೆಯುತ್ತಾರೆ. ಮತ್ತು ಸಂಸ್ಥೆಯು ಕೂಡಾ ಬೆಳೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದ ವಿಶೇಷ ಕಾರ್ಯಗಳನ್ನು ಗುರುತಿಸಿ. ಅತ್ಯುತ್ತಮ ಮುಖ್ಯೋಪಾಧ್ಯಾಯ, ಅತ್ಯುತ್ತಮ ಶಿಕ್ಷಕ, ಅತ್ಯುತ್ತಮ ಉಪನ್ಯಾಸಕ, ಅತ್ಯುತ್ತಮ ಗುಮಾಸ್ತ, ಅತ್ಯುತ್ತಮ ಶಾಲೆ & ಅತ್ಯುತ್ತಮ ಕಾಲೇಜು ಹೀಗೆ ಆರು ಪುರಸ್ಕಾರಗಳನ್ನು ನೀಡಿ ಅಭಿನಂದಿಸಿದರು.

ಅದೇ ರೀತಿ ವ್ಯಕ್ತಿತ್ವ ವಿಕಸನ ಕರ‍್ಯಾಗಾರದ ತರಬೇತಿದಾರರಾಗಿ ಮರಾಠಾ ಮಂಡಳ ಇಂಜಿನಿಯರಿಂಗ್ ಕಾಲೇಜ ನಿರ್ದೇಶಕರಾದ ಡಾ|| ಡಿ. ಜಿ. ಕುಲಕರ್ಣಿ ಆಗಮಿಸಿ ಶಿಕ್ಷಕರಾದವರು ಮಕ್ಕಳಲ್ಲಿ ಅಡಗಿರುವ ಸೂಕ್ತ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳಕಿಗೆ ತರುವ ಕೌಶಲ್ಯವನ್ನು ಹೊಂದಿರಬೇಕು. ಪ್ರತಿ ನಿತ್ಯ ಶಿಕ್ಷಕರಾದವರು ತಮ್ಮ ಅವಧಿಯಲ್ಲಿ ಯಾವುದಾದರು ಹೊಸ ವಿಷಯದ ಕುರಿತು ಕನಿಷ್ಠ ೫ ನಿಮಿಷ ನೂತನ ವಿಷಯಗಳ ಕುರಿತು ಮಾಹಿತಿ ನೀಡಿಬೇಕು. ಶಿಕ್ಷಕರಾದವರು ಮಕ್ಕಳಿಗೆ ಸೋತು ಗೆದ್ದವರ ಸಾಧನೆಯ ಕಥೆಗಳನ್ನು ಹೇಳಿ ಹುರಿದುಂಬಿಸಬೇಕು. ಪಾಲಕರ ಬೇಡಿಕೆಗಳಿಗೆ ಅನುಗುಣವಾಗಿ ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ತಯಾರಿಮಾಡಬೇಕು ಎಂದರು.
ಒಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಿ ಜವಾಬ್ದಾರಿಯನ್ನು ಅರಿತು ಸಮಾಜ ಸುಧಾರಣೆಯಲ್ಲಿ ತಮ್ಮ ಮಹತ್ವದ ಪಾತ್ರದ ಕುರಿತು ಅರಿವು ಹೊಂದಿರಬೇಕು ಎಂದು ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಹಾಗೂ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು. ಕಾರ್ಯಕ್ರಮದ ಕುರಿತು ನೇತೃತ್ವ ವಹಿಸಿದ ಜೊಲ್ಲೆ ಗ್ರುಪ್ ಉಪಾಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ಎಂ ಎಂ ಪಾಟೀಲ ಸ್ವಾಗತಿಸಿದರು. ಮಿಥುನ ಅಂಕಲಿ ನಿರೂಪಿಸಿದರು.