ಚಿಕ್ಕೋಡಿ :–
ರಾಜಸ್ಥಾನ ರಾಯಲ್ಸ್ ಕ್ರಿಕೆಟ್ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ₹24 ಲಕ್ಷ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡೂರು ಅವರನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಸಂಪರ್ಕಿಸಿ ರಾಜಸ್ಥಾನ ತಂಡಕ್ಕೆ ಸೇರಿಸುತ್ತೇವೆ ಎಂದು ನಂಬಿಸಿ ಹಣ ಪಡೆದಿದ್ದಾರೆ.
ಹಣ ನೀಡಿದರೂ ಯಾವುದೇ ತಂಡಕ್ಕೂ ಆಯ್ಕೆಯಾಗದೆ ಇದ್ದಿದ್ದರಿಂದ ರಾಕೇಶ್ ಬೆಳಗಾವಿ ಜಿಲ್ಲಾ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.