“ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆ ‘ಕಾಮಗಾರಿ ಸ್ಥಳದಲ್ಲಿಯೇ’ ಕಾರ್ಮಿಕ ದಿನಾಚರಣೆ ಆಚರಣೆ”

ಚಿಕ್ಕೋಡಿ :-

ಕಾರ್ಮಿಕರ  ಹಕ್ಕುಗಳ  ಹೊರಾಟಕ್ಕೆ ಹಾಗೂ ಕಾರ್ಮಿಕ ಪ್ರಭುತ್ವ ನೆನಪಿಗೆ 1889 ರಲ್ಲಿ ಮೊದಲ ಬಾರಿಗೆ ಮೇ ೧ ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಯಿತು ಕಾರ್ಮೀಕರಿಗೆ ಸಮಾನ ಕಲಸಕ್ಕೆ ಸಮಾನ ವೇತನ ಎಂಬ ಕಾಯಿದೆ.

   ಮಹಾತ್ಮಾ ಗಾಂಧಿ ನರೇಗಾ ಯೋಜನೆ ಎಷ್ಟೂ ಬಡ ಜನರು ಕೂಲಿ ಕೆಲಸಕ್ಕೆ ಬರುತ್ತಿದ್ದಾರೆ ಗ್ರಾಮೀಣ ಜನರು ಕೆಲಸವಿಲ್ಲ ಎಂದು ಚಿಂತೆ ಮಾಡದೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನಾ ಕೂಲಿ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎನ್ ವಣ್ಣೂರ ( ಕ , ಆ , ಸೇ ) ಅವರು ಹೇಳಿದರು .

ತಾಲೂಕಿನ ಇಂಗಳಿ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆ ಕಾಮಗರಿ ಸ್ಥಳದಲ್ಲಿ ಕಾರ್ಮಿಕ ದಿನಾಚರಣೆ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನರೇಗಾ ಯೋಜನೆಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಾಗಬೇಕಿದೆ ಹೇಳಿದರು . ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕೂಲಿ ಬೇಡಿಕೆ ಅರ್ಜಿ ಸಲ್ಲಿಸಿದವರಿಗೆ

 

ಕೂಡಲೆ ಕೆಲಸ ನೀಡಲಾಗುವದು ಕೂಲಿ ಕಾರ್ಮಿಕರು ರೈತ ತಮ್ಮ ಸ್ವಂತ ಜಮೀನಿನಲ್ಲಿ ವ್ಯಕ್ತಿತ್ವ ಕೆಲಸ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ . ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ವಲಯ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳು ಕೆಲಸ ಖಾತರಿಯನ್ನು ಒಡಗಿಸುವ ಮೂಲಕ ಬಡವರು ತಮ್ಮ ಬಡತನವನ್ನು ನಿವಾರಣ ಮತ್ತು ದೈನಂದಿನ ಜೀವನವನ್ನ ನಡೆಸಲು ಯೋಜನೆಯು ಉಪಯೋಗ ಪ್ರಧಾನ ಮಂತ್ರಿ ಜೀವನ ಜೋತಿ ಬೀಮಾ ಯೋಜನೆ ಮತ್ತು ಪ್ರದಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ವಿಮಾ ಯೋಜನೆಗಳನ್ನು ಕಡ್ಡಾಯವಾಗಿ ಎಲ್ಲಾ ಕೂಲಿ ಕಾರ್ಮಿಕರು ಮಾಡಬೇಕೆಂದು ಹೇಳಿದ್ದರು 

ತಾ ಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ ಮಾತನಾಡಿ ಬದುಕನ್ನು ಬಡಜನರ  ಹಸನಾಗಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ . ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೂಲಿ ನೀಡುವ ಉದ್ಯೋಗ , ಖಾತ್ರಿ ಆಗಿದೆ ಪ್ರಸ್ತುತ ವರ್ಷದಲ್ಲಿ ಕೂಲಿ ದರ 370 ರೂ. ಆಗಿದೆ ೧೦೦ ದಿನಗಳು ಕೂಲಿ ಕೆಲಸ ಮಾಡಿದ್ದರೆ 37000 ರೂಪಾಯಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ ಹಾಗೂ ಕಾಮಗರಿ ಸ್ಥಳದಲ್ಲಿ ಶುದ್ಧ ಕುಡಿಯುವುದು ನೀರಿನ ವ್ಯವಸ್ಥೆ ನೆರಳಿನ ವ್ಯವಸ್ಥೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಲಾಗುವುದು 2025-26 ನೇ ಸಾಲಿನಲ್ ಬೇಸಿಗೆ ಬಿಸಿಲಿನ ಪ್ರಮಾಣ ತೀವ್ರವಾಗಿ ಎಪ್ರೀಲ – ಮೇ ತಿಂಗಳಲ್ಲಿ ಕೆಲಸ ಪ್ರಮಾಣ ಶೇ .30 % ರಿಯಾಯತಿಯನ್ನು ರಾಜ್ಯ ಸರ್ಕಾರ ನೀಡಿದೆ . ಹಾಗೂ ಹಿರಿಯನಾಗರಿಕರಿಗೆ ಹಾಗೂ ,

 ವಿಕಲಚೇತನರಿಗೆ ಕೆಲಸದಲ್ಲಿ ಶೇ 50 % ನಷ್ಟು ರಿಯಾಯತಿ ಇದೆ  ಕೂಲಿ ಕಾರ್ಮಿಕರಿಗೆ ಏನು ಸಮಸ್ಯೆ ಆಗಬಾರದೆಂದು  ಬಿ ಎಪ್ ಟಿ ಗಳು , ಕಾಯಕ ಮಿತ್ರಗಳು , ಹಾಗೂ ಕಾಯಕ ಬಂದುಗಳನ್ನು ಆಯ್ಕೆ ಮಾಡಲಾಗಿ ಎಂದು ಹೇಳಿದ್ದರು

ಇಂಗಳಿ ಗ್ರಾಮ ಪಂಚಾಯತಿಯಲ್ಲಿ ಕಾಯಕ ಬಂದುಗಳಿಗೆ ಸನ್ಮಾನಿಸಲಾಯಿತು . ಕೂಲಿ ಕಾರ್ಮಿಕರು ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಸಂತೋಷ ಹಂಚಿಕೊಂಡರು . ಕಾರ್ಯನಿರ್ವಾಹಕ ಅಧಿಕಾರಿಗಳು ಇಲ್ಲಾ ಕೂಲಿ ಕಾರ್ಮೀಕರಿಗೆ ಕ್ಯಾಪ್ ವಿತರಣೆ ಮಾಡಿದರು ಕೂಲಿ ಕಾರ್ಮೀಕರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿತ್ತು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಮನ ಶೆಳಕೆ ಉಪದ್ಯಾಕ್ಷರಾದ ವಂದನಾ ಮಹಾದೇವ ಕಾಂಬಳೆ,   ಪಿಡಿಒ ಸಿದ್ದಪ್ಪ ಹಿರೇಕುರಬರ, ಕಾರ್ಯದರ್ಶಿ ಜಿವಾಜಿ ಕುಲಕರ್ಣಿ, ಎಸ್ ಡಿ ಎ ಸುರೇಶ ಮೇತ್ರಿ , , ಐಐಸಿ ಸಂಯೋಜಕ ರಂಜೀತ ಕಾರ್ಣಿಕ, ಬಿ . ಎಪ್ . ಟಿ ಅಜ್ಜಪ್ಪ ತಳವಾರ, ಪ್ರವೀಣ ಮಗದುಮ್ಮ ,ಚೇತನ ಗಾವಡೆ, ತಾತ್ಯಾಸಾಬ ಶಿಂದೂರೆ, ಮೋಹನ ಐವಳೆ ಹಾಗೂ ಕಲ್ಲಪ್ಪ ಕಾಂಬಳೆ ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *