ಚಿಕ್ಕೋಡಿ :- ಕಾರ್ಮಿಕರ ಹಕ್ಕುಗಳ ಹೊರಾಟಕ್ಕೆ ಹಾಗೂ ಕಾರ್ಮಿಕ ಪ್ರಭುತ್ವ ನೆನಪಿಗೆ 1889 ರಲ್ಲಿ ಮೊದಲ ಬಾರಿಗೆ ಮೇ ೧ ರಂದು ಕಾರ್ಮಿಕ ದಿನಾಚರಣೆ ಆಚರಿಸಲಾಯಿತು ಕಾರ್ಮೀಕರಿಗೆ ಸಮಾನ ಕಲಸಕ್ಕೆ ಸಮಾನ ವೇತನ ಎಂಬ ಕಾಯಿದೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆ ಎಷ್ಟೂ ಬಡ ಜನರು ಕೂಲಿ ಕೆಲಸಕ್ಕೆ ಬರುತ್ತಿದ್ದಾರೆ ಗ್ರಾಮೀಣ ಜನರು ಕೆಲಸವಿಲ್ಲ ಎಂದು ಚಿಂತೆ ಮಾಡದೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನಾ ಕೂಲಿ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎನ್ ವಣ್ಣೂರ ( ಕ , ಆ , ಸೇ ) ಅವರು ಹೇಳಿದರು . ತಾಲೂಕಿನ ಇಂಗಳಿ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆ ಕಾಮಗರಿ ಸ್ಥಳದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ನರೇಗಾ ಯೋಜನೆಡಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಾಗಬೇಕಿದೆ ಹೇಳಿದರು . ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕೂಲಿ ಬೇಡಿಕೆ ಅರ್ಜಿ ಸಲ್ಲಿಸಿದವರಿಗೆ ಕೂಡಲೆ ಕೆಲಸ ನೀಡಲಾಗುವದು ಕೂಲಿ ಕಾರ್ಮಿಕರು ರೈತ ತಮ್ಮ ಸ್ವಂತ ಜಮೀನಿನಲ್ಲಿ ವ್ಯಕ್ತಿತ್ವ ಕೆಲಸ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ . ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ವಲಯ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳು ಕೆಲಸ ಖಾತರಿಯನ್ನು ಒಡಗಿಸುವ ಮೂಲಕ ಬಡವರು ತಮ್ಮ ಬಡತನವನ್ನು ನಿವಾರಣ ಮತ್ತು ದೈನಂದಿನ ಜೀವನವನ್ನ ನಡೆಸಲು ಯೋಜನೆಯು ಉಪಯೋಗ ಪ್ರಧಾನ ಮಂತ್ರಿ ಜೀವನ ಜೋತಿ