ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲುಕಿನ ಕೆರೊರ ಗ್ರಾಮದಲ್ಲಿ ರೈತ ಸಂಘಟನೆ ವತಿಯಿಂದ ಹಮ್ಮಿಕೊಂಡ ಸಭೆಯಲ್ಲಿ ವಿದ್ಯುತ್ ಸರಬರಾಜು ಸರಿಯಾಗಿ ನೀಡುತ್ತಿಲ್ಲ.ದಿನಕ್ಕೆ 2 ಅಥವಾ 1 ಗಂಟೆ ಕರೆಂಟ್ ನೀಡುತ್ತಿದ್ದಾರೆ. ಈ ಬಾರಿ ಬರಗಾಲ ಸಂಕಷ್ಟ ರೈತರು ಎದುರಿಸುತ್ತಿದ್ದಾರೆ ಅದರಲ್ಲಿ ಇದ್ದುದರಲ್ಲಿ ನೀರನ್ನು ಹರಿಸಿ ಬೆಳೆ ಉಳಿಸಿಕೊಳ್ಳೋಣ ಅಂದ್ರೆ ಕರೆಂಟ್ ಇಲ್ಲಾ
ದನಕರುಗಳಿಗೆ ನೀರು ಸಿಗುತ್ತಿಲ್ಲ ಎಂದು ಚಿಕ್ಕೋಡಿ ತಾಲೂಕಾ ಹಸಿರು ಸೇನೆ ಅಧ್ಯಕ್ಷರಾದ ಮಂಜುನಾಥ ಪರಗೌಡರು ಮಾತನಾಡಿ 2 ದಿನಗಳಲ್ಲಿ ಸರಿಯಾಗಿ ಕರೆಂಟ್ ಪೂರೈಸಬೇಕು.
ಇಲ್ಲವಾದರೆ ಗುರುವಾರ ದಿನ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಚಿಕ್ಕೋಡಿ ಹೆಸ್ಕಾಂ ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಗಡವು ನೀಡಿದ್ದಾರೆ.ಈ ಸಭೆಯಲ್ಲಿ ಚಿಕ್ಕೋಡಿ ತಾಲುಕಿನ ಹೆಸ್ಕಾಂ, ಎಸ್ ಬಂಡಗಾರ ಎ ಇ ಇ, ಅಂಕಲಿ ಶಾಖಾದಧಿಕಾರಿ, ಪಾಟೀಲ ಹಾಗೂ ಸಿನೀಯರ್ ಅಸಿಸ್ಟೆಂಟ್, ಕುಮಾರ ಕುಲಕರ್ಣಿ, ಮಾತನಾಡಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಬಾಳಗೌಡ ಪಾಟೀಲ.ಮಲ್ಲು ಕಾನಡೆ,ಜ್ಯೋತಿಬಾ ಮಗದುಮ,ಬಾಪು ಕುತ್ತೆ,ಅಜಿತ ಮೂರನಾಳೆ ಹಾಗೂ ಅಪ್ಪಾಸಾಬ ಕೋಳಿ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.
+ There are no comments
Add yours