ಬೆಂಗಳೂರು :–
2022ರಲ್ಲಿ ಕೊಡಗಿನ ಭೂಕುಸಿತ ಅವಲೋಕನಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಪ್ರಕರಣದ
ಆರೋಪಿ ಸಂಪತ್ ಎಂಬಾತನ ಮೃತದೇಹ ಹಾಸನದ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಯಾರೋ ಮಾರಕಾಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ, ಅವರದ್ದೇ ಕಾರಿನಲ್ಲಿ ಶವವನ್ನು ತಂದು ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ.
ಕುಶಾಲನಗರ ಠಾಣೆಯಲ್ಲಿ ಸಂಪತ್ ನಾಪತ್ತೆಯಾದ ಬಗ್ಗೆ ಕೇಸ್ ದಾಖಲಾಗಿತ್ತು.