“ಕಾರ್ಖಾನೆಯ ಅಭಿವೃದ್ಧಿ ಕಾಮಗಾರಿಗಳ ಆರ್ಥಿಕ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಖಾನೆಯನ್ನು ಪ್ರಗತಿಪಥದತ್ತ ಕೊಂಡೊಯ್ಯಲಾಗುತ್ತಿದೆ” : ಅಣ್ಣಾಸಾಹೇಬ ಜೊಲ್ಲೆ


ಚಿಕ್ಕೋಡಿ :–

ಹುಕ್ಕೇರಿ ತಾಲುಕಿನ ಸಂಕೇಶ್ವರ ಪಟ್ಟಣದಲ್ಲಿ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ., ಸಂಕೇಶ್ವರ ಸಭಾಗ್ರಹದಲ್ಲಿ ಹುಕ್ಕೇರಿ ತಾಲೂಕಿನ ಎಲ್ಲ ಸೌಹಾರ್ದ ಕೋ- ಆಪರೇಟಿವ ಹಾಗೂ ಕ್ರೆಡಿಟ್ ಸೌಹಾರ್ದ ಸೊಸಾಯಿಟಿಗಳ ನಿರ್ದೇಶಕ ಮಂಡಳಿ ಹಾಗೂ ಸೆಕ್ರೆಟರಿಗಳ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಸಭೆ ನಡೆಸಿ, ಮಾತನಾಡಿದರು.

ಸೌಹಾರ್ದ ಸಹಕಾರ ಸಂಘಗಳು ಕಾರ್ಖಾನೆಯ ಅಭಿವೃದ್ಧಿ ಕಾಮಗಾರಿಗಳ ಆರ್ಥಿಕ ಅನುಕೂಲಕ್ಕಾಗಿ ಸಹಕಾರಿಗಳು ನೀಡುವ ಠೇವಿಗೆ ಬೀರೇಶ್ವರ ಸಹಕಾರಿಯೂ ಸಂಪೂರ್ಣ ಜವಾಬ್ದಾರಿಯಾಗಲಿದೆ.

ಕಾರ್ಖಾನೆಯಲ್ಲಿ ಈಗಾಗಲೇ ಕೋಜನ್, ಎಥೆನಾಲ್, ಕಟ್ಟಡ,ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಕಾರ್ಮಿಕ ಕಲ್ಯಾಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಖಾನೆಯನ್ನು ಪ್ರಗತಿಪಥದತ್ತ ಕೊಂಡೊಯ್ಯಲಾಗುತ್ತಿದೆ.

ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಲಟ್ಟಿ,ಉಪಾಧ್ಯಕ್ಷರಾದ ಶ್ರೀ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕ ಮಂಡಳಿ ಸದಸ್ಯರು, ಸೊಸೈಟಿಗಳ ನಿರ್ದೇಶಕ ಮಂಡಳಿ ಸದಸ್ಯರು,ಕಾರ್ಖಾನೆ ಮುಖ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *