“ಈ ಸಂವತ್ಸರದಲ್ಲಿ ಹೊಸ ರೋಗ ಬರಲಿದೆ, ಈಗಾಗಲೇ ಬಂದಿದೆ, ಇದು ಐದು ವರ್ಷಗಳವರೆಗೆ ಇರಲಿದೆ” : ಕೋಡಿಮಠ ಶ್ರೀಗಳು

ಕೋಡಿಮಠ ಶ್ರೀಗಳು ಮಾಧ್ಯಮದವರ ಜೊತೆ ಮಾತನಾಡಿ ಕೆಲ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಈ ಸಂವತ್ಸರದಲ್ಲಿ ಹೊಸ ರೋಗ ಬರಲಿದೆ, ಈಗಾಗಲೇ ಬಂದಿದೆ, ಇದು ಐದು ವರ್ಷಗಳವರೆಗೆ ಇರಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಕೊರೊನಾ ವೈರಸ್ ಮತ್ತೊಂದು ರೂಪವನ್ನು ತಾಳಲಿದ್ದು, ಈ ಬಾರಿ ವಾಯು ರೂಪದಲ್ಲಿ ಬರಲಿದೆ ಎಂದರು. ವಾಯು ರೂಪದಲ್ಲಿ ಬರುವ ಈ ವೈರಸ್ ಉಸಿರಾಟಕ್ಕೆ ತೊಂದರೆಯಾಗಲಿದ್ದು, ತಲೆ ತನಕ ಹೋಗಿ ಮನುಷ್ಯನಿಗೆ ಸಾವು ಬರುವ ಲಕ್ಷಣಗಳು ಬಹಳ ಇದೆ ಎಂದೂ ಸಹ ತಿಳಿಸಿದರು.

ಇದರಿಂದ ಲೋಕಕ್ಕೇ ಕಂಟಕ ಎದುರಾಗಲಿದ್ದು, ಹೋಗಿ ಬಂದು ಮಾಡುತ್ತಾ ಐದು ವರ್ಷಗಳ ಕಾಲ ಇರಲಿದೆ ಎಂದರು.

Share this post:

Leave a Reply

Your email address will not be published. Required fields are marked *