ಚಿಕ್ಕೋಡಿ :
ತಾಲುಕಿನ ಯಕ್ಸಂಬಾ ಪಟ್ಟಣದಲ್ಲಿರುವ ಶ್ರೀ ಜ್ಯೋತಿ ಸೌಹಾರ್ದ ಸಹಕಾರಿ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.50 ಕೋಟಿ ನಿವ್ವಳ ಲಾಭ ಗಳಿಸಿದ್ದು,ಕಳೆದ ಆರ್ಥಿಕ ವರ್ಷದ ಲಾಭದ ಮೇಲೆ ಶೇ.35 ರಷ್ಟು ಬೆಳವಣಿಗೆ ಸಾಧಿ ಸಿದೆ ಎಂದು ಸಂಸ್ಥೆಯ ನಿರ್ದೇಶಕ ರಮೇಶ ಚೌಗುಲೆ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಸಹಕಾರಿಯು ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹ ಸಂಸ್ಥಾಪಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ 83 ಶಾಖೆಗಳ ಮೂಲಕ ಸೇವೆ ಪ್ರಾರಂಭಿಸಿ, ಜನರಿಗೆ ಆರ್ಥಿಕದೊಂದಿಗೆ ಹಲವು
ಯಕ್ಸಂಬಾ ಪಟ್ಟಣದ ಶ್ರೀ ಜ್ಯೋತಿ ಸೌಹಾರ್ದ ಸಹಕಾರಿ ನಿರ್ದೇಶಕ ರಮೇಶ ಚೌಗುಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೌಲಭ್ಯಗಳನ್ನು ಒಂದೇ ಸೂರಿನಡಿ ನೀಡಿದೆ.ಜತೆಗೆ ಹಲವಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಮುಂಬರುವ ದಿನಗಳಲ್ಲಿ ಕಾರ್ಯವ್ಯಾಪ್ತಿಯನ್ನು ರಾಜ್ಯದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಸಂಸ್ಥೆ 37,543 ಸದಸ್ಯರನ್ನು ಹೊಂದಿದ್ದು 2 ಕೋಟಿ ರೂ. ಶೇರು ಬಂಡವಾಳ ಹಾಗೂ 8.14 ಕೋಟಿ ರೂ.ಕಾಯ್ದಿಟ್ಟ ನಿಧಿ, 297 ಕೋಟಿಗೂ ಮೀರಿ ದುಡಿಯುವ ಬಂಡವಾಳ ಹೊಂದಿದೆ. 287 ಕೋಟಿಗೂ ಮೀರಿ ಠೇವು ಸಂಗ್ರಹವಾಗಿದೆ.
ಈ ವರೆಗೆ 130 ಕೋಟಿಗೂ ಹೆಚ್ಚು ಸಾಲ ವಿತರಿಸಿದ್ದು,133 ಕೋಟಿ ರೂ,ಬ್ಯಾಂಕ್ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಗುಂತಾವಣೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಾಬುರಾವ್ ಮಾಳಿ,ಜಗದೀಶ ಹಿಂಗ್ಲಜೆ,ಮಲಗೌಡಾ ಪಾಟೀಲ, ಜ್ಯೋತಿ ಗಿಡ್ಡ,ಸೈಫುದ್ದೀನ್ ಮುಲ್ಲಾ ಕಲ್ಲಪ್ಪ ನಾಯಿಕ,ವಿಶ್ವನಾಥ ಪೇಟೆಕರ,ಸವಿತಾ ಉಂದುರೆ, ಕೃಷ್ಣಪ್ಪ ಪೂಜಾರಿ,ಲಕ್ಷ್ಮಣ ಪೂಜಾರಿ,ಸಹಕಾರಿಯ ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಬಾವಿ, ಉಪಪ್ರಧಾನ ವ್ಯವಸ್ಥಾಪಕ ಸಂತೋಷ ಪಾಟೀಲ,ತಾನಾಜಿ ಶಿಂಧೆ,ಸಂಸ್ಥೆಯ ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.
+ There are no comments
Add yours