ಚಿಕ್ಕೋಡಿ :–
ಶರಣರ ಮಹಿಮೆಯು ತಿಳಿಯುವುದೇ ಶಿವಾ ಎಂಬ ಉಕ್ತಿಯಂತೆ ನಾವು ಬದುಕಿದಾಗ ಸತ್ಪರುಷ ಶರಣರ ಸಂಘದಲ್ಲಿ ಇರಬೇಕು, ಅದರಿಂದ ಪಾವಿತ್ರ್ಯ ಮನುಷ್ಯ ಜನ್ಮ ಆಧ್ಯಾತ್ಮೀಕ ಪಾರಮಾರ್ಥದಲ್ಲಿ ಬೆರೆಯುವದರಿಂದ ನಮ್ಮನ್ನು ಮುಕ್ತಿ ಮಂದಿರಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಕೇರೂರ ಜ್ಯೋತಿರ್ಲಿಂಗ ಆಶ್ರಮದ ಕೇದಾರಲಿಂಗ ಶರಣರು ಅಭಿವ್ಯಕ್ತ ಪಡಿಸಿದರು.
ಅವರು ಕಳೆದ ರವಿವಾರ ದಿನಾಂಕ 06 ರಂದು ತಾಲುಕಿನ ಶ್ರೀ ಸದ್ಗುರು ಶರಣರ ಕಲಾಸೇವಾ ಮಂಡಳ, ಧುಳಗನವಾಡಿ ಖೋತ ಪರಿವಾರದ ಆಶ್ರಯದಲ್ಲಿ 106ನೇ ಸುವಿಚಾರ ಚಿಂತನಗೋಷ್ಠಿ ಭಜನಾ ಕಾರ್ಯಕ್ರಮ ಹಾಗೂ ಲಿಂ. ಸದ್ಗುರು ಬಸವಪ್ರಭು ಮಹಾರಾಜರ ನುಡಿ ಸ್ಮರಣೆ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡಿ, ಸದ್ಗುರು ಬಸವಪ್ರಭು ಮಹಾರಾಜರು ಪ್ರಪಂಚ ಮಾಡಿ ಪಾರಮಾರ್ಥ ಗೆದ್ದವರು ಅವರ ಸರಳ ಶಾಂತಗುಣ ಆಧ್ಯಾತ್ಮೀಕ ಭೋದನೆಯ ಶಿಷ್ಯರಿಗೆ ಜ್ಞಾನದಾರಿ ದೀಪವಾಗಿತ್ತು ಎಂದು ಬನ್ನಿಸಿದರು.
ಕಮತೇನಟ್ಟಿಯ ಪೂಜ್ಯ ಹನುಮಂತಶಾಸ್ತ್ರಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಜೀವನದಲ್ಲಿನ ಕತ್ತಲೆ ಕಲ್ಮಷವನ್ನು ದೂರ ಮಾಡಲು ಸದ್ಗುರುವಿಗೆ ಮಾತ್ರ ಸಾಧ್ಯ ಅಂತಹ ಸದ್ಗುರುವಿನ ಮೇಲೆ ಶಿಷ್ಯರು ನಂಬಿಕೆ ಇಟ್ಟು ಸನ್ಮಾರ್ಗದಲ್ಲಿ ಬೇರೆತು ಜೀವನ ಪಾವನ ಮಾಡಿಕೋಳ್ಳಬೆಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಖಡಕಲಾಟದ ಮಾತೋಶ್ರೀ ಸಾವಿತ್ರಮ್ಮ ವಿಜಯನಗರೆ ಇವರು ಮಾತನಾಡಿ ಜೀವನದ ಆಡಂಬರ ದೂರ ಮಾಡಲು ಪ್ರವಚನ ಶಾಸ್ತ್ರ ಪುರಾಣ ಕೇಳುವುದರಿಂದ ಮನಸ್ಸು ನಿರ್ಮಲವಾಗುತ್ತದೆ ಅಂತಹ ಗುರು ಮಾರ್ಗ ಲಭಿಸಲು ಪೂರ್ವ ಜನ್ಮದ ಪುಣ್ಯ ಬೇಕೆಂದರು.
ಕಾರ್ಯಕ್ರಮದಲ್ಲಿ ಧನಪಾಲ ಕಮತೆ, ಶಶಿಕಾಂತ ಜಂಗಿ, ಮಾರುತಿ ಕಾಮಗೌಡ, ವಿಜಯ ವಾಘಮಾರೆ, ಸಂತ್ರಾಮ ಮಯೂರ, ಸದ್ಗುರುಗಳ ನುಡಿ ಸ್ಮರಣೆ ಗುಣಗಾನ ಮಾಡಿದರು. ಕಲಾವಿದರಾದ ಸಂಜೀವ ರಾ. ಚೌಗಲೆ, ಶ್ರೀಕಾಂತ ಸಿ. ದೊಡ್ಡಮನಿ ಇವರಿಗೆ ಶಾಲು ಹೋದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪ್ಪಾಸಾಬ ಖೋತ, ಪ್ರಕಾಶ ಚಿಕ್ಕೋಡೆ, ಮಾರುತಿ ಚಿಮನೆ, ರಾಮಪ್ಪ ಮಗದುಮ್ಮ, ಉಪಸ್ಥಿತರಿದರು. ಪ್ರಾಸ್ತಾವಿಕವಾಗಿ ಭರತ ಕಲಾಚಂದ್ರ ಮಾತನಾಡಿದರು. ಸುಜಾತಾ ಮಗದುಮ್ಮ ನಿರೂಪಿಸಿದರು. ಸುಪ್ರೀಯಾ ಕಲಾಚಂದ್ರ ಸ್ವಾಗತಿಸಿ, ವಂದಿಸಿದರು.





