ಪಿ ಐ ಎಲ್ ಅರ್ಜಿ ಸಲ್ಲಿಸಲು ಧಾರವಾಡ, ಕಲ್ಬುರ್ಗಿ ಹೈಕೊರ್ಟ್ ನಲ್ಲಿ ಅವಕಾಶ ದೊರೆತಿದೆ

Estimated read time 1 min read
Share with Your friends

    ಮಿಯಾಲಾಲ ಕಿಲ್ಲೇದಾರ
    ಚಿಕ್ಕೋಡಿ

    ಧಾರವಾಡ ಮತ್ತು ಕಲ್ಬುರ್ಗಿ ಹೈಕೋರ್ಟ ಪೀಠಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ (ಪಿ ಐ ಎಲ್ ) ಪ್ರಕರಣ ದಾಖಲಿಸಲು ಅವಕಾಶ ನೀಡಿದ್ದು, ಈ ಭಾಗದ ಸಾರ್ವಜನೀಕರಿಗೆ ಅನೂಕೂಲ ಕಲ್ಪಿಸಿದಂತೆ ಆಗಿದೆ. ಈ ಎರಡೂ ಪೀಠಗಳಲ್ಲಿ ಪಿಐಎಲ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂದು ಹೈಕೋರ್ಟ ಪೀಠಗಳ ವಕೀಲರ ಸಂಘಗಳು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದವು.

    ಧಾರವಾಡ ಹೈಕೋರ್ಟ ಪೀಠ

    ಇತ್ತೀಚಿಗೆ ಈಗಿನ ರಾಜ್ಯ ಹೈಕೋರ್ಟ ಮುಖ್ಯ ನ್ಯಾಯ ಮೂರ್ತಿ ಎನ್. ವಿ. ಅಂಜಾರಿಯಾ ಧಾರವಾಡ ಪೀಠಕ್ಕೆ ಆಗಮಿಸಿದ್ದಾಗ, ಇಲ್ಲಿಯ ಹೈಕೋರ್ಟ ವಕೀಲರ ಸಂಘವೂ ಪಿ ಐ ಎಲ್ ಅರ್ಜಿ ಸಲ್ಲಿಕೆ ಸೇರಿದಂತೆ ಹಸಿರು ಪೀಠ ಸ್ಥಾಪನೆ ಹಾಗೂ ನ್ಯಾಯಾಂಗ ಇಲಾಖೆಯ ಸೇವಾಪ್ರಕರಣಗಳ ವಿಚಾರಣೆಗಳನ್ನು ಇಲ್ಲಿಯೇ ನಡೆಸಲು ಅವಕಾಶ ಕೋರಿ ತನ್ನ ಮನವಿ ನೀಡಿತ್ತು. ಸಂಘದ ಈ ಮನವಿಯನ್ನು ಗಂಭೀರವಾಗಿ ಪರಿಗಣ ಸಿದ ಮುಖ್ಯ ನ್ಯಾಯಮೂರ್ತಿಗಳು ಸಧ್ಯಕ್ಕೆ ಈ ಎರಡೂ ಪೀಠಗಳಲ್ಲಿ ಸಾರ್ವಜನೀಕ ಹಿತಾಸಕ್ತಿ ಮೊಕ್ಕದ್ದಮೆಗಳ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ.
    ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಶಿಘ್ರ ನ್ಯಾಯದಾನ ಒದಗಿಸಲು, ರಾಜ್ಯ ಉಚ್ಛನ್ಯಾಯಾಲಯದ ಪೀಠಗಳನ್ನು ಸ್ಥಾಪಿಸಬೇಕೆಂದು ದಶಕಗಳ ಕಾಲ ಹೋರಾಟ ಮಾಡಿ ಪೀಠ ಪಡೆಯುವಲ್ಲಿ ಯಶಸ್ವಿಯಾದ ಈ ಭಾಗದ ವಕೀಲರಿಗೆ ಈಗ ಮತ್ತೊಂದು ಯಶಸ್ಸು ದೊರೆತಿದೆ.
    ಪಿ ಐ ಎಲ್ ಗಳಲ್ಲಿ ಎರಡು ಪ್ರಕಾರಗಳು
    ಇನ್ಮುಂದೆ ಧಾರವಾಡ ಹಾಗೂ ಕಲ್ಬುರ್ಗಿ ಪೀಠಗಳಲ್ಲಿ ಎರಡು ಪ್ರಕಾರಗಳಲ್ಲಿ ಪಿ ಐ ಎಲ್ ಅರ್ಜಿ ಸಲ್ಲಿಸಬಹುದಾಗಿದೆ.
    ೧. ಪತ್ರ ಮುಖೇನ ಸಾರ್ವಜನೀಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು. ಸರ್ವಜನೀಕರು ತಮ್ಮ ಮನವೀ ಪತ್ರ ವನ್ನು ಸಲ್ಲಿಸಿದಾಗ ಅದು ಪಿ ಐ ಎಲ್ ಸೆಲ್ ಗೆ ಹೋಗಿ ಸಮೀತಿಯ ಪರಿಶೀಲನೆಗೆ ಒಳಪಡುತ್ತದೆ. ಸಮೀತಿಯ ಸದಸ್ಯರೂ ಈ ಪತ್ರವನ್ನು ಸಮಗ್ರವಾಗಿ ಪರಿಶೀಲಿಸಿ ಸಂಬAಧ ಪಟ್ಟ ಮಾಹಿತಿ ಸಂಗ್ರಹಿಸಿ ಅದನ್ನು ಮುಖ್ಯ ನ್ಯಾಯ ಮೂರ್ತಿಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸುತ್ತಾರೆ.
    ೨. ವಕೀಲರ ಮೂಲಕ ಪಿ ಐ ಎಲ್ ಮೊಕದ್ದಮೆ ದಾಖಲು ಮಾಡುವುದಾಗಿದೆ.
    ಹೈಬ್ರೀಡ್ ಮಾದರಿಯಲ್ಲಿ ವಿಚಾರಣೆ
    ಈ ಪಿ ಐ ಎಲ್ ಪ್ರಕ್ರರಣಗಳಲ್ಲಿ ವಕೀಲರು ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳಲ್ಲಿ ತಮ್ಮ ವಾದಗಳನ್ನು ವಿಡಿಯೋ ಕಾನ್ಪರೆನ್ಸ ಮೂಲಕ ಮಂಡಿಸಲು ಅವಕಾಶವಿದೆ. ಮುಖ್ಯ ನ್ಯಾಯ ಮೂರ್ತಿಗಳು ವಿಡಿಯೋ ಕಾನ್ಫರೆನ್ಸ ಮೂಲಕವೇ ವಾದ ವಿವಾದ ಆಲಿಸುತ್ತಾರೆ. ಇದಕ್ಕೆ ಹೈಬ್ರೀಡ್ ಮಾದರೀ ಎಂದು ಹೇಳಲಾಗುತ್ತದೆ .

    ಧಾರವಾಡ ಹೈಕೋರ್ಟ ವಕೀಲರ ಸಂಘದ ಅಧ್ಯಕ್ಷ. ಶ್ರೀ . ವಿ. ಎಮ್. ಶೀಲವಂತ
    ಪಿ ಐ ಎಲ್ ನಲ್ಲಿ ಕಾರ್ಮಿಕ ಕಾಯಿದೆಗಳಡಿಯ ವಿಷಯಗಳು, ನಿರ್ಲಕ್ಷಿತ ಮಕ್ಕಳ ಕುರಿತು, ಪರಿಸರ, ಆಹಾರ ಭದ್ರತೆ, ವನ್ಯಜೀವಿ, ಪುರತಣ ಕಟ್ಟಡ, ಸ್ಥಳಗಳು, ನೈಸರ್ಗಿಕ ವಿಪ್ಪತ್ತು, ಮೂಲಭೂತ ಸೌಕರ್ಯ ಹಾಗೂ ಸಾಂಕ್ರಾಮಿಕ ರೋಗ ಇತ್ಯಾದಿ ವಿಷಯಗಳಿಗೆ ಸಂಬAಧಪಟ್ಟAತೆ, ಮೊಕ್ಕದ್ದಮೆ ಹೂಡಲು ಅವಕಾಶವಿದೆ. ಇನ್ನು ಭೂಸುಧಾರಣಾ
    ಕಾಯ್ದೆ, ವೈವಾಹಿಕ ವಿವಾದ, ಶಿಕ್ಷಣ ಸಂಸ್ಥೇಯ ಪ್ರಕ್ರರಣಗಳು, ಪೋಲಿಸ್ ಪ್ರಕರಣ ಗಳು ಇತ್ಯಾದಿಗಳಿಗೆ ಪಿ ಐ ಎಲ್ ನಲ್ಲಿ ಅವಕಾಶ ವಿಲ್ಲ ಎಂದು ಈ ಬಗ್ಗೆ ವಿವರಗಳನ್ನು ಧಾರವಾಡ ಹೈಕೋರ್ಟ ವಕೀಲರ ಸಂಘದ ಅಧ್ಯಕ್ಷರಾದ ವಿ. ಎಮ್. ಶೀಲವಂತ ಇಂಟೆಲ್ಲಿಜೆನ್ಸರ ನ್ಯೂಸ್ ಟೈಮ್ಸ ವಾಹಿನಿಗೆ ಮಾಹಿತಿ ನೀಡಿದರು.
    ಮೊದಲ ಪ್ರಕರಣ
    ಧಾರವಾಡ ಮತ್ತು ಕಲ್ಬುರ್ಗಿ ಹೈಕೋರ್ಟ ಪೀಠಗಳಲ್ಲಿ ಪಿ. ಐ. ಎಲ್ ಅರ್ಜಿ ಸಲ್ಲಿಸಲು ೨೦೨೪ ಅಗಷ್ಟ ತಿಂಗಳಿAದ ಅವಕಾಶ ದೊರೆತ ನಂತರ ಇದೀಗ ವಿಜಯನಗರ ಜಿಲ್ಲೆಗೆ ಸಂಬAಧಿಸಿದAತೆ ಪ್ರಥಮ ಪಿ ಐ ಎಲ್ ಅರ್ಜಿ ದಾಖಲಾಗಿದೆ. ವಕೀಲ ಶ್ರೀನಂದ ಪಾಚಾಪೂರೆ ಇವರು ಈ ಪ್ರಕರಣವನ್ನು ದಾಖಲಿಸಿದ್ದು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಳವಿ ಗ್ರಾಮದಲ್ಲಿ ಎಮ್ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪಣೆಗೆ ಅವಕಾಶ ನೀಡದಂತೆ ಕೋರಲಾಗಿದೆ. ಈ ಗ್ರಾಮದ ಮಹಿಳೆಯರು ತಮ್ಮ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ೨೩ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅವರ ಹೋರಾಟಕ್ಕೆ ಯಶಸ್ಸು ಸಿಕ್ಕಿರಲಿಲ್ಲಾ ಇದೀಗ ಗ್ರಾಮದಲ್ಲಿ ಇನೊಂದು ಎಮ್. ಎಸ್. ಐ. ಎಲ್ ಮದ್ಯ ಮಾರಾಟ ಮಳಿಗೆಗೆ ಅನುಮತಿ ದೊರೆತಿದೆ ಎಂಬ ಮಾಹಿತಿ ಹಿನ್ನೇಲೆಯಲ್ಲಿ ಗ್ರಾಮಸ್ಥರು ನ್ಯಾಯಾಂಗದ ಮೊರೆ ಹೋಗಿದ್ದಾರೆ. ವಕೀಲ ಶ್ರೀನಂದ ಪಾಚಾಪೂರೆ ಗ್ರಾಮಸ್ಥರ ಪರವಾಗಿ ಧಾರವಾಡ ಹೈಕೋರ್ಟ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಧಾರವಾಡ ಹೈಕೋರ್ಟ ವಕೀಲ ಶ್ರೀನಂದ ಪಾಚಾಪೂರೆ
    ಪಿ ಐ ಎಲ್ ಅರ್ಜಿಗಳನ್ನು ಈ ವರೆಗೆ ಹೈಕೋರ್ಟನ ಪ್ರಧಾನ ಕೇಂದ್ರ ಬೆಂಗಳೂರಿನಲ್ಲಿ ಮಾತ್ರ ಸಲ್ಲಿಸಬಹುದಾಗಿತ್ತು. ಬೆಂಗಳೂರಿಗೆ ಹೋಗಿ ಬರುವ ಖರ್ಚು ವೆಚ್ಚು ಹಾಗೂ ಸಮಯ ಇತ್ಯಾದಿಗಳನ್ನು ಗಮನದಲ್ಲಿಟ್ಟು ಅನೇಕರು ಪಿ.ಐ.ಎಲ್ ಉಸಾಬರಿಯಿಂದ ದೂರ ಉಳಿಯುತ್ತಿದ್ದರು, ಇದೀಗ ಧಾರವಾಡ ಮತ್ತು ಕಲ್ಬುರ್ಗಿ ಹೈಕೋರ್ಟ ಪೀಠಗಳಲ್ಲಿ ಪಿ.ಐ.ಎಲ್ ಅರ್ಜಿ ಸಲ್ಲಿಸಲು ಅವಕಾಶ ದೊರೆತಿರುವದರಿಂದ ನ್ಯಾಯಕ್ಕಾಗಿ ಹೊರಾಡುತ್ತಿರುವ ಜನರು ಮತ್ತು ಸಂಘಟನೆಗಳು ಈ ಅವಕಾಶದ ಸದುಪಯೋಗ ಪಡೆಯಬೇಕೆಂದು ವಕೀಲ ಶ್ರೀನಂದ ಪಾಚಾಪೂರೆ ವಿನಂತಿಸಿದರು.


    Share with Your friends

    You May Also Like

    More From Author

    + There are no comments

    Add yours