ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ರಾಜ್ಯದ ಪ್ರತಿಷ್ಠಿತ ಜೊಲ್ಲೆ ಗ್ರುಪ್ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀ
ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಅಣ್ಣಾಸಾಹೇಬ ಜೊಲ್ಲೆ ಮತ್ತು ಸಹ ಸಂಸ್ಥಾಪಕಿ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿನ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.50 ಕೋಟಿ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಶೇ.10 ರಷ್ಟು ಲಾಭಾಂಶ ಸದಸ್ಯರ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಹಕಾರಿಯ ನಿರ್ದೇಶಕ ರಮೇಶ ಚೌಗುಲೆ ಹೇಳಿದರು.
ಶನಿವಾರ ತಾಲುಕಿನ ಯಕ್ಸಂಬಾ ಪಟ್ಟಣದಲ್ಲಿ ಜ್ಯೋತಿ ಸೌಹಾರ್ದ ಸಹಕಾರಿಯ ಸಭಾ
ಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಜ್ಯೋತಿ ಸೌಹಾರ್ದ ಸಹಕಾರಿಯು ಇಂದು ಕ್ರೆಡಿಟ್ ವಿಭಾಗ 63 ಮತ್ತು ಬಾಜಾರ ವಿಭಾಗ 18 ಹೀಗೆ ಒಟ್ಟು 81 ಶಾಖೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. 22-23 ನೇ ಸಾಲಿನ ಶೇರ್ ಬಂಡವಾಳ 1.56 ಕೋಟಿ ರೂ.ಗಳ ಮೇಲೆ ಶೇ. 10 ರಂತೆ ಸಹಕಾರಿಯ 30.677 ಸದಸ್ಯರ ಬ್ಯಾಂಕ್ ಖಾತೆಗಳಿಗೆ ಒಟ್ಟು 15.62 ಲಕ್ಷ ರೂ. ಜಮಾ ಮಾಡಲಾಗಿದೆ.
ಸಹಕಾರಿಯಲ್ಲಿ ಸೇವೆ ಸಲ್ಲಿಸುತ್ತಿರುವ 448 ಸಿಬ್ಬಂದಿ ಬೋನಸ್ ಒಂದು ತಿಂಗಳ ವೇತನ (8.33) 44.12 ಲಕ್ಷರೂ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸಹಕಾರಿಯು 39,923 ಸದಸ್ಯರನ್ನು ಹೊಂದಿ, 2.20 ಕೋಟಿ ರೂ ಶೇರುಬಂಡವಾಳ, 9.54 ಕೋಟಿ ರೂ ನಿಧಿ, 294.04 ಕೋಟಿ ರೂ.ಗಳಷ್ಟು ಠೇವುಗಳನ್ನು ಸಂಗ್ರಹಿಸಿ, 108.73 ಕೋಟಿ ರೂ.ಗಳಷ್ಟು ಸಾಲ ವಿತರಸಿ, 1.50 ಕೋಟಿ ರೂ ನಿವ್ವಳ ಲಾಭ ಗಳಿಸಿದ್ದು ಸಹಕಾರಿಯು 305.79 ಕೋಟಿ ರೂ.ಗಳಷ್ಟು ದುಡಿಯುವ ಬಂಡವಾಳ ಹೊಂದಿದೆ, ಅದಲ್ಲದೆ ಜೋತಿಬಾಜಾರಲ್ಲಿ 2000 ರೂ ವರಗೆ ಖರಿದಿಸಿದ ಗ್ರಾಹಕರಿಗೆ ಲಕಿಡ್ತಾ ಕೋಪನ್ ನೀಡಲಾಗುತ್ತದೆ ದೀಪಾವಳಿನಂತರ ಡ್ರಾಮೂಲಕ ಚೀಟಿ ಎತ್ತಿ ಬಹುಮಾನವನ್ನು ವಿತರಿಸಲಾಗುವುದು ಎಂದು ಹೇಳಿದರು.
ಜ್ಯೋತಿ ಸಹಕಾರಿಯ ನೂತನ ನಿರ್ದೆಶಕರನ್ನಾಗಿ ಜಗದೀಶ ಜಾಧವ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಸನ್ಮಾನಿಸಿದರು.
ಸಹಕಾರಿಯ ಉಪಾಧ್ಯಕ್ಷ ಬಾಬುರಾವ ಮಾಳಿ, ನಿರ್ದೇಶಕರಾದ ಮಲಗೌಡಾ ಪಾಟೀಲ, ಜ್ಯೋತಿ ಗಿಡ್ಡ, ಕಲ್ಲಪ್ಪಾ ನಾಯಿಕ, ಶರಪುದ್ದಿನ ಮುಲ್ಲಾ, ವಿಶ್ವನಾಥ ಪೇಟಕರ, ಲಕ್ಷ್ಮಣ ಪ್ರಭಾತ, ಮತ್ತು ಸವಿತಾ ಉಂದುರೆ, ಪ್ರಧಾನ ವ್ಯವಸ್ಥಾಪಕ ಸಂತೋಶ ಪಾಟೀಲ, ಸಂತೋಶ ಪುಜಾರಿ, ತಾನಾಜಿ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.
+ There are no comments
Add yours