ಹೊಸ ದಹಲಿ :–
ನಾಯಕರು 75 ವರ್ಷ ತುಂಬಿದಾಗ ನಿವೃತ್ತರಾಗಬೇಕು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ, ಮೋಹನ್ ಭಾಗವತ್
ಅವರ ಹೇಳಿಕೆಗೆ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯೆ ವ್ಯಕ್ತವಾಯಿತು,
ಸೆಪ್ಟೆಂಬರ್‌ನಲ್ಲಿ ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ವ್ಯಕ್ತಿಗೆ ಇದು ಸ್ಪಷ್ಟ ಸಂದೇಶ
ಎಂದು ಪ್ರಿಯಾಂಕಾ ಹೇಳಿದರು. ಪ್ರಧಾನಿ ಹಲವು ದೇಶಗಳಿಗೆ ಭೇಟಿ ನೀಡಿದ ನಂತರ ಎಲ್ಲರಿಗೂ ಇದು ತಿಳಿದಿದೆ,
ಜಗತ್ತಿಗೂ ಸಹ ಇದು ತಿಳಿದಿದೆ ಎಂದು ಅವರು ತಿಳಿಸಿದರು.





