ನಿಪ್ಪಾಣಿ :–
ಗವಾನ ಗ್ರಾಮದಲ್ಲಿ ದೇಶದ ಗಮನ ಸೆಳೆಯುವಂತಹ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು 1925 ರಲ್ಲಿ ನಿಪ್ಪಾಣಿಗೆ ಭೇಟಿ ನೀಡಿದ ಶಾಶ್ವತವಾಗಿ ನೆನಪಿಡಲು ಅಂಬೇಡ್ಕರ ಮ್ಯೂಸಿಯಂ ನಿರ್ಮಿಸುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರವಾಸಿ ತಾಣದ ಕುರಿತು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಪೂರ್ವಭಾವಿ ಜೊತೆ ಸಭೆ ನಡೆಸಿ ಚರ್ಚಿಸಿದರು.

ರಾಜ್ಯ ಸರಕಾರದಿಂದ 1 ಕೋಟಿ 36 ಲಕ್ಷ,ಶಾಸಕರ ನಿಧಿಯಿಂದ 1 ಕೋಟಿ ಹಾಗೂ ಜೊಲ್ಲೆ ಗ್ರೂಪ್ ವತಿಯಿಂದ 1 ಕೋಟಿ ಹಣ ನೀಡಲಾಗುವುದು. ದೇಶದ ಗಮನ ಸೆಳೆಯುವಂತಹ ಅಂಬೇಡ್ಕರ್ ಮ್ಯೂಸಿಯಂ, ಕ್ರಾಂತಿ ಸ್ತಂಭ, ಭೌಧ್ದ ಸ್ತೂಪ ದಲಿತ ಮಕ್ಕಳಿಗೆ ಹಾಸ್ಟೆಲ್, ಅತಿಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ನಿರ್ಮಾಣ.
ಈ ಭೇಟಿಯ ನೂರು ವರ್ಷಗಳ ನೆನಪನ್ನು ಅಜರಾಮರ ವನ್ನಾಗಿಸುವ ನಿಟ್ಟಿನಲ್ಲಿ 3.30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು.
ಈ ಸಭೆಯಲ್ಲಿ ತಹಶೀಲ್ದಾರ ಮುಜಾಫರ ಬಳಿಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಾನೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ ಕುರುಡಗಿ ಹಾಗೂ ತಾಲೂಕ ಮಟ್ಟದ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.





