ಬೆಂಗಳೂರು :–
ಹಾಸನದಲ್ಲಿ ಹೃದಯಾಘಾತದಿಂದಾಗಿ 40 ದಿನಗಳಲ್ಲಿ 34 ಜನ ಸಾವನ್ನಪ್ಪಲು
ಅತಿಯಾದ ಮಾಂಸಾಹಾರ ಸೇವನೆ, ಜೀವನಶೈಲಿ ಬದಲಾವಣೆ ಮತ್ತು ಕೆಲಸದ ಒತ್ತಡ ಪ್ರಮುಖ ಕಾರಣ ಎಂದು ಹೃದ್ರೋಗ ತಜ್ಞ ಡಾ. ಮಹಾಂತೇಶ್ ಚರಂತಿಮಠ ಅವರು ಹೇಳಿದರು
ಹಾಸನದಲ್ಲಿ ಬಾಡೂಟಗಳ ಆಯೋಜನೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
ಸಮಪರ್ಕ ವ್ಯಾಯಾಮ ಇಲ್ಲದೇ ಇದ್ದರೆ ಹೃದಯದ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು ಇದೆ ಎಂದು ಅವರು ಹೇಳಿದ್ದಾರೆ.