ಸಾಮಾನ್ಯ ಮಟ್ಟಕ್ಕಿಂತ ಒಂದು ಗಂಟೆ ಕಡಿಮೆ ನಿದ್ರೆ ಮಾಡಿದರೆ, ದೇಹವು ಸುಧಾರಿಸಲು ಕನಿಷ್ಠ 4 ದಿನಗಳು ಬೇಕಾಗುತ್ತದೆ ಎಂದು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಸುಧೀರ್ ಕುಮಾರ್ ತಿಳಿಸಿದರು.
ಒಂದು ತಾಸಿನ ಕೊರತೆಯೂ ತಲೆನೋವು, ಏಕಾಗ್ರತೆಯ ಕೊರತೆ, ಕಿರಿಕಿರಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗಬಹುದು ಎಂದು ಹೇಳಿದರು.
ಇದರಿಂದ ದಿನವಿಡೀ ಆಕಳಿಕೆ, ಅರೆನಿದ್ರಾವಸ್ಥೆಗೆ ಕಾರಣವಾಗಬಹುದು, ಆದ್ದರಿಂದ ವಯಸ್ಕರು 7 ರಿಂದ 9 ಗಂಟೆಗಳ ಕಾಲ ಮಲಗಲು ಸಲಹೆ ನೀಡಲಾಗುತ್ತದೆ.





