ಚಿಕ್ಕೋಡಿ :–
ಮನುಷ್ಯ ಬದುಕಿ ಆರೋಗ್ಯ ಜೀವನ ನಡೆಸಬೇಕೆಂದರೆ, ಸಸಿಗಳನ್ನು ನೆಟ್ಟು ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಬೆಳೆಸಬೇಕು ನಮಗೆ ಅವು ಪರೋಪಕಾರದಿಂದ ಆಮ್ಲಜನಕ ಹೂವು ಹಣ್ಣು ಕಾಯಿ ನೀಡುತ್ತವೆ. ಗಿಡ ಮರಗಳು ಬುಕಿದ್ದಾಗಲು ಮತ್ತೇ ಒಣಗಿದ ಮೇಲೆಯು ನಮ್ಮ ಬದುಕಿಗೆ ಆಸರೆ ನೀಡುತ್ತವೆ. ಸಸ್ಯ ಸಂಕುಲ ಪ್ರಾಣಿ ಸಂಕುಲ ಉಳಿಸುವಲ್ಲಿ ಪ್ರತಿಯೊಬ್ಬರು ಕೈ ಜೋಡೆಸಬೇಕೆಂದು ಖಡಲಾಟದ ಸರಕಾರಿ ಪ.ಪೂ ಕಾಲೇಜು ಪ್ರಾಚಾರ್ಯರಾದ ರಾಜೇಂದ್ರ ಎ. ಬೇಲೆಕರ ಯುವ ಜನರಿಗೆ ಕರೆ ನೀಡಿದರು. ಅವರು ಕಳೆದ ಸೋಮವಾರ ದಿ. 21 ರಂದು ಮೈ ಭಾರತ ಕೇಂದ್ರ, ಬೆಳಗಾವಿ, ವಲಯ ಅರಣ್ಯಾಧಿಕಾರಿಗಳ ಕಛೇರಿ ಚಿಕ್ಕೋಡಿ, ಸ್ನೇಹಚೇತನ ಕಲಾಪ್ರೇರಣೆ ಸಮುದಾಯ ಸೇವಾ ಬಳಗ, ಬೇಡಕಿಹಾಳ, ಸರಕಾರಿ ಪ.ಪೂ ಕಾಲೇಜು ಖಡಕಲಾಟ ಇವರ ಸಂಯುಕ್ತ ಆಶ್ರಯದಲ್ಲಿ

ತಾಯಿ ಹೆಸರಿನಲ್ಲಿ ಒಂದು ಮರ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.
ಅತಿಥಿಗಳಾಗಿ ಆಗಮಿಸಿದ ಆರ್ಥಿಕ ಸಾಕ್ಷರತಾ ಕೇಂದ್ರದ ಕೌನ್ಸಿಲರ್ ವಿಜಯ ವಾಘಮಾರೆ ಇವರು ಸಸಿಗೆ ನಿರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಸಿರು ಪರಿಸರ ನಮ್ಮ ನಾಡಿಗೆ ಸೊಬಗು ಮಕ್ಕಳ ತಾಯಿ ಮೇಲೆ ಪ್ರೀತಿ ಇಟ್ಟಂತೆ ಸಸ್ಯಗಳ ಮೇಲೆಯೂ ಪ್ರೀತಿ ಮಮತೆ ಇಟ್ಟು ಗಗಿಡಮರಗಳನ್ನು ಬೆಳಸುವಲ್ಲಿ ಇಂದಿನ ಯುವ ಜನರು ಮನಸ್ಸು ಮಾಡಬೇಕು. ನೀವು ಪರಿಸರ ರಕ್ಷಿಸಿದರೇ ನಿಮ್ಮನ್ನು ರಕ್ಷಿಸುತ್ತದೆ ಎಂದರು.
ಕಲಾಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಸಿರ ತಹಶಿಲ್ದಾರ, ಬಂಡಾ ಸರದಾರ ಕಾಲೇಜು ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದರು. ಹಾಗೇಯೇ ಕಾಲೇಜು ಆವರಣಗಳಲ್ಲಿ ಸಸಿಗಳನ್ನು ನೆಡಲಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಸ್ಮರಣಿಕೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಇಕೋ ಕ್ಲಬ್‌ನ ಸಲೋನಿ ಜಿಫರೆ, ಪ್ರಾಚಿ ಕುರಣೆ, ಸುಚಿತಾ ಕಮತೆ ಹಾಗೂ ಉಪನ್ಯಾಸಕರಾದ ಲತಾ ಕಾಂಬಳೆ, ಸಂಗೀತಾ ಮೇತ್ರಿ, ಪೂರ್ಣಿಮಾ ಜನವಾಡೆ, ಇಮ್ರಾನ ಗೌಂಡಿ ಭರತ ಕಲಾಚಂದ್ರ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಕಾರ್ಯಕ್ರಮ ಸಂಘಟಕ ನಾಗರಾಜ ಮಾಲಗತ್ತೆ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಸಸಿಗಳ ಪಾಲನೆ ಪೋಷಣೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸುಪ್ರೀಯಾ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ಎಸ್. ಎಸ್.ಲೋಂಡೆ ಸ್ವಾಗತಿಸಿದರು, ಸಚೀನ ವಂಜಿರೆ ವಂದಿಸಿದರು.