ಬೆಂಗಳೂರು :–
ಭಾರತೀಯ ಜೀವ ವಿಮಾ ನಿಗಮವು ಬಿಮಾ ಸಖಿ ಯೋಜನೆ-2025ರ ಅಡಿಯಲ್ಲಿ ಮಹಿಳಾ ಏಜೆಂಟರಿಗೆ ಮೊದಲ ವರ್ಷ ಮಾಸಿಕ ರು 7,000 ಆದಾಯ ಸಿಗಲಿದೆ.
2 ನೇ ವರ್ಷ ₹6,000 ಮತ್ತು 3ನೇ ವರ್ಷ ರು 5,000 ಮಾಸಿಕ ಆದಾಯ ಸಿಗುತ್ತದೆ. ಇದರೊಂದಿಗೆ, ಮೊದಲ ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ರು 48,000 ಬೋನಸ್ ಕೂಡಾ ಲಭಿಸಲಿದೆ.
10ನೇ ತರಗತಿ ಪಾಸ್ ಆಗಿರುವ 18ರಿಂದ 70 ವರ್ಷದ ಮಹಿಳೆಯರು ಈ ಯೋಜನೆಗೆ ಅರ್ಹತೆ ಹೊಂದಿರುತ್ತಾರೆ. ಆಸಕ್ತರು ಎಲ್ ಐ ಸಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.





