ಹಲವಾರು ಬ್ಯಾಂಕುಗಳು ಯು ಪಿ ಐ(UPI) ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವ ಪಾವತಿ ಸಂಗ್ರಾಹಕರಿಂದ (PAs) ಶುಲ್ಕ ವಿಧಿಸಲು ನಿರ್ಧರಿಸಿವೆ ಎಂಬ ವರದಿಯಾಗಿದೆ.
ಐ ಸಿ ಐ ಸಿ ಐ ಮತ್ತು ಎಕ್ಸಿಸ್ ಸೇರಿದಂತೆ ಕೆಲವು ಬ್ಯಾಂಕುಗಳು ಶುಲ್ಕ ವಿಧಿಸಲು ಪ್ರಾರಂಭಿಸಿವೆ. ಇದು ಶೀಘ್ರದಲ್ಲೇ ಅಥವಾ ಭವಿಷ್ಯದಲ್ಲಿ UPI ಬಳಕೆದಾರರ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎಂದು ತಜ್ಞರು ಊಹಿಸಿದ್ದಾರೆ.
ಆದರೆ, ಪಿ ಎ ಎಸ್ ನಿಂದ ಶುಲ್ಕ ವಿಧಿಸುವ ಪ್ರಸ್ತಾಪವು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಹಲವಾರು ಪಾವತಿ ಸಂಗ್ರಾಹಕರು ಹೇಳಿದ್ದಾರೆ.





