ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ 32 ವರ್ಷದ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಗ್ರಾಮಸ್ಥರು ಆಕೆಯನ್ನು ಹಿಡಿದಿದ್ದಾರೆ.
ತದನಂತರ ಸ್ಥಳೀಯ ಪಂಚಾಯತ್ ಆದೇಶದಂತೆ,
“ಇಬ್ಬರ ತಲೆಗೂದಲು ಬೋಳಿಸಿ, ಮುಖಕ್ಕೆ ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಬುಧವಾರ ಮೆರವಣಿಗೆ” ಮಾಡಿದ್ದಾರೆ.
ಪ್ರಿಯಕರನ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





