ನಾಲಿಗೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಯಶೋದಾ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ. ಸಚಿನ್ ಮರ್ದಾ ಯವರಿಂದ ವಿವರಣೆ.
ಇವುಗಳಲ್ಲಿ ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ನಾಲಿಗೆಯ ಮೇಲೆ ಹುಣ್ಣು ಕಾಣಿಸುವುದು, ಬಾಯಿಯಲ್ಲಿ ಬಿಳಿ/ಕೆಂಪು ಕಲೆಗಳು,
ನಾಲಿಗೆಯಲ್ಲಿ ನಿರಂತರ ನೋವು (ವಿಶೇಷವಾಗಿ ತಿನ್ನುವಾಗ ಅಥವಾ ಮಾತನಾಡುವಾಗ), ನಾಲಿಗೆಯ ಮೇಲೆ ಯಾವುದೇ ರೀತಿಯ ಗಡ್ಡೆ,
ನಾಲಿಗೆಯ ಚಲನೆಯಲ್ಲಿ ತೊಂದರೆ ಮತ್ತು ನಾಲಿಗೆಯಿಂದ ರಕ್ತಸ್ರಾವ ಆಗುವುದು ಸೇರಿವೆ.





