ಚಿಕ್ಕೋಡಿ :–
ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ ಹಾಗೂ ಜಾಗೃತಿ ಜಾಥಾ
ಕೆ ಎಲ್ ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ ಚಿಕ್ಕೋಡಿ ಹಾಗೂ ತಾಲುಕಿನ ಗ್ರಾಮ ಪಂಚಾಯತಿ ಕರೋಶಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದ ನಿಮಿತ್ತವಾಗಿ,

ಸೋಮವಾರ ದಿ. ೧೫ ರಂದು ಆಯುರ್ವೇದದ ಮಹತ್ವ, ಬೊಜ್ಜು, ಕ್ಯಾನ್ಸರ ರೋಗದ ಜಾಗೃತಿ ಜಾಥಾವನ್ನು ಕರೋಶಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ.
ಮಂಗಳವಾರ ದಿ ೧೬, ರಂದು ಮುಂಜಾನೆ ೧೦:೦೦ ರಿಂದ ೩:೦೦ ರವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಅಂಗನವಾಡಿ ಕೇಂದ್ರ ಗ್ರಾಮ ಪಂಚಾಯತಿ ಹಿಂದೆ ಕರೋಶಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಬೆನ್ನುನೋವು, ಮೊಣಕಾಲು ನೋವು, ಚರ್ಮದ ಸಮಸ್ಯೆ, ಕಣ್ಣು, ಕಿವಿ, ಮೂಗು ಗಂಟಲಿನ ಸಮಸ್ಯೆ, ಮೂಲವ್ಯಾಧಿ, ಭಗಂದರ, ಕಿಡ್ನಿ, ಮಹಿಳೆಯರ ಮತ್ತು ಚಿಕ್ಕ ಮಕ್ಕಳ ಸಮಸ್ಯೆಗಳಿಗೆ ಆಯುರ್ವೇದ ವೈದ್ಯರಿಂದ ಉಚಿತ ತಪಾಸಣೆ ಮಾಡಲಾಗುವುದು. ಶಿಬಿರದಲ್ಲಿ ಉಚಿತ ಔಷಧೋಪಚಾರ ನೀಡಲಾಗುವುದು. ಆದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ ೦೮೩೩೮೨೭೫೧೦೦.





