ಉಪಾಹಾರವನ್ನು ಬಿಡುವುದು ಮತ್ತು ತಡರಾತ್ರಿ ಊಟ ಮಾಡುವುದು ಯುವಕರಲ್ಲಿ ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣ ಎಂದು ಚೆನ್ನೈನ ಹೃದ್ರೋಗ ತಜ್ಞ ಡಾ. ಬಾಬು ಎಜುಮಲೈ ತಿಳಿಸಿದರು.

ಉಪಾಹಾರ ಬಿಡುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ತಡರಾತ್ರಿ ಊಟ ಮಾಡುವುದರಿಂದ ಗ್ಲೋಕೋಸ್ ಸಂಗ್ರಹವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಇವೆಲ್ಲವೂ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.





