ಬೆಂಗಳೂರು :–
ಮೈಸೂರು ದಸರಾ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಚಿವರು ತೆರೆದ ವಾಹನದಲ್ಲಿ ಪರೇಡ್ ನಡೆಸುವಾಗ ಅದೇ ವಾಹನದಲ್ಲಿ ಸಚಿವ ಮಹದೇವಪ್ಪ ಅವರ ಮೊಮ್ಮಗ ಕೂಡ ಇದಿದ್ದು ಬೆಳಕಿಗೆ ಬಂದಿದೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಮಾತ್ರ ಭಾಗವಹಿಸಬೇಕು.
ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರ ಭಾಗವಹಿಸುವಿಕೆ ಏಕೆ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಪ್ರಶ್ನಿಸಿ ಹೈಕಮಾಂಡ್ ನಾಯಕರು ವರದಿ ಕೇಳಿದ್ದಾರೆ ಎಂದು ವರದಿಯಾಗಿವೆ.





