“ವಿದ್ಯಾರ್ಥಿಗಳು ಬೌದ್ಧಿಕ, ಶಾರೀರಿಕ,ಮಾನಸಿಕ ಭಾವನಾತ್ಮಕವಾಗಿ ಸದೃಢರಾಗಿ ಜೀವನ ಕೌಶಲಗಳನ್ನು ಅಳವಡಿಸಿಕೊಳ್ಳಲು ಕರೆ” : ಶಾಸಕಿ ಶಶಿಕಲಾ ಜೊಲ್ಲೆ

ಚಿಕ್ಕೋಡಿ :–

“ಸ್ಕೌಟ್ಸ್ – ಗೈಡ್ಸ್ ಗಳ ಸ್ಕೌಟಿಂಗ್ ಪರಿಚಯಾತ್ಮಕ ಶಿಬಿರ”

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಬೆಳಗಾವಿ ಜಿಲ್ಲೆ, ಸ್ಥಳೀಯ ಸಂಸ್ಥೆ ಚಿಕ್ಕೋಡಿ ಹಾಗೂ ಜೊಲ್ಲೆ ಎಜ್ಯುಕೇಶನ್ ಸೊಸೈಟಿ ಯಕ್ಸoಬಾ ಇವರ ಸಹಯೋಗದಲ್ಲಿ ಕಬ್ – ಬುಲ್ ಬುಲ್ ಮತ್ತು ಸ್ಕೌಟ್ಸ್ – ಗೈಡ್ಸ್ ಗಳ ಒಂದು ದಿನದ ಸ್ಕೌಟಿಂಗ್ ಪರಿಚಯಾತ್ಮಕ ಶಿಬಿರವನ್ನು ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ತಾಲುಕಿನ ನನದಿ ಕ್ಯಾoಪಸ್ ನಲ್ಲಿ ಆಯೋಜಿಸಲಾಗಿತ್ತು.

ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆಯವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಾಜಿ ಸಚಿವರು ಹಾಗೂ ನಿಪ್ಪಾಣಿಯ ಶಾಸಕರಾದ ಶಶಿಕಲಾ ಜೊಲ್ಲೆಯವರು ಎಲ್ಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾರತ ಸ್ಕೌಟ್ಸ್ – ಗೈಡ್ಸ್ ಗಳಂತಹ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು, ನಾಯಕತ್ವ, ರಕ್ಷಣೆ, ಸೇವಾ ಭಾವ, ಸಹಬಾಳ್ವೆ, ಸಮಯ ಪಾಲನೆ, ನಿಸರ್ಗ ಪ್ರೇಮ ಗಳಂತಹ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತವೆ. ವಿದ್ಯಾರ್ಥಿಗಳು ಬೌದ್ಧಿಕ, ಶಾರೀರಿಕ, ಮಾನಸಿಕ ಭಾವನಾತ್ಮಕವಾಗಿ ಸದೃಢರಾಗಿ ಜೀವನ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ದೇಶಾಭಿಮಾನ, ಸಂಸ್ಕೃತಿ ಸದಾಚಾರಗಳನ್ನು ಮೆರೆಯಬೇಕು. ಭವ್ಯ ಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬಹುದಾದ ಗುರಿ ಹಾಗೂ ಉದ್ದೇಶಗಳ ಕುರಿತು ಮಾತನಾಡಿದರು. ರಾಷ್ಟ್ರ ಸೇವೆಗೆ ಯಾವತ್ತು ಬದ್ಧರಾಗಿರಬೇಕೆಂದು ಹೇಳಿದರು.

ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ವಿಠ್ಠಲ ಎಸ್. ಬಿ ಅವರು ಭಾರತ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ನಡೆದು ಬಂದ ದಾರಿಯ ಕುರಿತು ಸುದೀರ್ಘವಾಗಿ ಮಾತನಾಡಿದರು. ಈ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಹಕಾರ, ಸಹಬಾಳ್ವೆ, ಶಿಸ್ತು, ಪರಿಸರ ಕಾಳಜಿ, ಸಾಮಾಜಿಕ ಹೊಣೆಗಾರಿಕೆ, ನಾಯಕತ್ವ, ಆತ್ಮ ಸಂತೋಷ, ಸೇವಾ ಮನೋಭಾವನೆ, ಆತ್ಮಸ್ಥೈರ್ಯ, ಗುಣಾತ್ಮಕತೆ ಹಾಗೂ ಸ್ಪರ್ಧಾತ್ಮಕ ಮನೋಭಾವನೆಗಳನ್ನು ಕಲಿಸಿಕೊಡುತ್ತದೆ ಎಂದರು. ಜೊಲ್ಲೆ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ 484 ವಿದ್ಯಾರ್ಥಿಗಳು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ , ಕರ್ನಾಟಕ ಸಂಸ್ಥೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.

                 ಶಿಬಿರದಲ್ಲಿ ಎನ್.ಜಿ ಪಾಟೀಲ ಜಿಲ್ಲಾ ಸಂಘಟನಾ ಶಿಕ್ಷಕರು, ತರಬೇತಿದಾರರಾಗಿ ಸಂಜಯ ಸದಲಗೆ, ಮಹೇಶ ಪೂಜಾರ, ಆಶಾ ಹುಲಿಕವಿ, ಸಿರಿಯಾ ಹುಲಿಕವಿ, ಮಹಾದೇವಿ ಜಿನಗೌಡರ, ಮುಖ್ಯೋಪಾಧ್ಯಾಯರಾದ ವಿರುಪಾಕ್ಷಿ ಭಿವಸೆ, ಸೀಮಾ ಪಾಟೀಲ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ವಿಜಯ ನಾಯಕ ಸ್ವಾಗತಿಸಿದರು. ಹೂವಾನಂದ ಮಾಳಗೆ ನಿರೂಪಿಸಿದರು.

Share this post:

Leave a Reply

Your email address will not be published. Required fields are marked *

You cannot copy content of this page