ಭಾರತದಲ್ಲಿ ಸುಮಾರು 85% ಡಿಜಿಟಲ್ ಪಾವತಿ ವಹಿವಾಟುಗಳನ್ನು ಏಕೀಕೃತ ಪಾವತಿ ಇಂಟರ್ಫೇಸ್ (ಯು ಪಿ ಐ) ಮೂಲಕ ನಡೆಸಲಾಗುತ್ತದೆ ಎಂದು,
ಆರ್ ಬಿ ಐ ಗವರ್ನರ್ ಸಂಜಯ್ ಮಲ್ಲೋತ್ರಾ ಹೇಳಿದರು. “ಪ್ರತಿ ತಿಂಗಳು ಸುಮಾರು ೨0 ಬಿಲಿಯನ್ ವಹಿವಾಟುಗಳನ್ನು ಯು ಪಿ ಐ ಬಳಸಿ ಮಾಡಲಾಗುತ್ತದೆ, ಇದು $ ೨೮0 ಬಿಲಿಯನ್‌ಗಿಂತ ಹೆಚ್ಚಿನ ಮೌಲ್ಯವನ್ನು ಪ್ರತಿನಿಧಿಸುತ್ತದೆ ಎಂದು ಅವರು ತಿಳಿಸಿದರು. ಯು ಪಿ ಐ ಆರ್ಥಿಕ ಸೇರ್ಪಡೆಯನ್ನು ವೇಗಗೊಳಿಸುವ ಪ್ರಬಲ ವೇಗವರ್ಧಕ ಎಂದು ಅವರು ಶ್ಲಾಘಿಸಿದರು.





