ಚಿಕ್ಕೋಡಿ :–
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ವಿಜಯಪುರ ಜಿವರ್ಗಿ ರಸ್ತೆ ತುಂಬೆಲ್ಲಾ ಗುಂಡಿಗಗಳಿವೆ, ಗುಂಡಿಗಳ ದರ್ಬಾರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ.

ಗುಂಡಿಗಳನ್ನು ತಪ್ಪಿಸಲು ಹೋಗಿ ತುಂಬಾ ರಸ್ತೆ ಅಪಘಾತಗಳು ದಿನಾಲು ಸಂಭಸುತ್ತಿವೆ ದೊಡ್ಡ ದೊಡ್ಡ ಗುಂಡಿ ಬಿದ್ದರು ತಿರುಗಿ ನೊಡದ ಅಧಿಕಾರಿಗಳು
ಇದೆ ರಸ್ತೆಯಲ್ಲಿ ಚಿಕ್ಕೊಡಿ ಉಪವಿಭಾಗ ವ್ಯಾಪ್ತಿಯ ಬಹುತೇಕ ಜನಪ್ರತಿನಿಧಿಗಳು ಪ್ರಯಣಿಸುತ್ತಾರೆ ಕನಿಷ್ಠ ಪಕ್ಷ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದೆ ಇರೋದು ವಿಪರ್ಯಾಸದ ಸಂಗತಿ
ಕಾಗವಾಡ ದಿಂದ ಗೋಟೂರ ರವರೆಗಿನ ರಸ್ತೆಯಲ್ಲಿ ಗುಂಡಿ ಬಿದ್ದು ರಸ್ತೆ ಸಂಚಾರಕ್ಕೆ ತುಂಬಾ ಕಷ್ಟ ಆಗುತ್ತಿದೆ, ಗುಂಡಿಗಳನ್ನು ಮುಚ್ಚಿ ಎಂದು ಜನ ಸಾಮಾನ್ಯರ ಮತ್ತು ವಾಹನ ಸವಾರರ ಬಗ್ಗೆ ಕಾಳಜಿ ವಹಿಸಿ ಆಂಬುಲೆನ್ಸ್ ಬಸ್ ಸಂಚಾರ ತೊಂದರೆ ಆಗಿದೆ ಎರಡು ದಿನಗಳಲ್ಲಿ ಗುಂಡಿ ಮುಚ್ಚಿ ಎಂದು ತಿಳಿಸಿದ್ದಾರೆ,ಇಲ್ಲವಾದರೆ ಗುಂಡಿಯಲ್ಲಿ ಗಿಡ ಹಚ್ಚುವ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಚಿಕ್ಕೋಡಿ ತಾಲೂಕಾ ರೈತ ಮುಖಂಡ ಮಂಜುನಾಥ ಪರಗೌಡರು, ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.





