ಬೆಂಗಳೂರು :–
ವಾಯುವ್ಯ ದೆಹಲಿಯ ಇಬ್ರಾಹಿಂಪುರ ಗ್ರಾಮದಲ್ಲಿ ನಕಲಿ ಈನೋ ,ENO ತಯಾರಿಸುತ್ತಿದ್ದ ಕಾರ್ಖಾನೆಯನ್ನು ಪತ್ತೆಹಚ್ಚಲಾಗಿದೆ.

ದಾಳಿಯ ವೇಳೆಯಲ್ಲಿ , ೯೧,೨೫೭ ನಕಲಿ ಈನೋ ಸ್ಯಾಷೆಗಳು, ೮೦ ಕಿಲೋಗ್ರಾಂಗಳಷ್ಟು ಕಚ್ಚಾ ವಸ್ತುಗಳು, ೫೪,೭೮೦ ಸ್ಟಿಕ್ಕರ್‌ಗಳು, ೨,೧೦೦ ಖಾಲಿ ಪ್ಯಾಕಿಂಗ್ ಪೌಚ್‌ಗಳು ಮತ್ತು ೧೩ ಕಿಲೋಗ್ರಾಂಗಳಿಗೂ ಹೆಚ್ಚು ಮುದ್ರಿತ ರೋಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕಲಿ ಪುಡಿಯನ್ನು ಉತ್ಪಾದಿಸಲು ಬಳಸಿದ ಯಂತ್ರವನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.





