ಬೆಳಗಾವಿ :–
ಕಬ್ಬಿಗೆ ದರ ನಿಗದಿ ಮಾಡುವ ಅಧಿಕಾರ ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರದ ಕೈಯಲ್ಲಿದೆ. ಆದರೂ ರೈತರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಯತ್ನಿಸುತ್ತಿದೆ ಎಂದು ಜೆಲ್ಲೆಯ ಗುರ್ಲಾಪುರ ದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಕೇಂದ್ರದ ಸರ್ಕಾರದ ಸಕ್ಕರೆ ಸಚಿವರು ಕರ್ನಾಟಕ ರಾಜ್ಯದವರೇ ಇದ್ದಾರೆ. ದುರದೃಷ್ಟವಶಾತ್ ಇಲ್ಲಿಯವರೆಗೆ ಯಾರೂ ಪ್ರಹ್ಲಾದ್ ಜೋಶಿ ಅವರ ಹೆಸರು ತೆಗೆದಿಲ್ಲ.
ಶಿವಾನಂದ ಪಾಟೀಲ್ ಸ್ಥಳಕ್ಕೆ ಬಂದಿಲ್ಲ ಎಂದು ಮಾತ್ರ ಆರೋಪಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.





