ಚಿಕ್ಕೋಡಿ :–
ತಾಲೂಕಿನ ಇಟನಾಳ ಗ್ರಾಮದ ಸರ್ಕಾರಿ ಜಮೀನಿನ ರಿ.ಸ.ನಂ. 6/ಎ2 ಈ
ರಿ.ಸ.ನಂಬರದಲ್ಲಿ ಅಕ್ರಮವಾಗಿ ಸೋಲಾರ ಘಟಕ ಸ್ಥಾಪನೆಗೆ ಅನುಮತಿ
ನೀಡಬಾರದೆಂದು ಮನವಿಯನ್ನು ಸಲ್ಲಿಸಿದರು
ಇಟನಾಳ ಗ್ರಾಮದಲ್ಲಿ ಸರ್ಕಾರಿ ಗೋಮಾಲ್ ಪಡ್ ಜಮೀನ ವಿದ್ದು ಅದರ ರಿ.ಸ.ನಂ.6/ಎ2 ವಿರುತ್ತದೆ ಸದರಿ ಜಮೀನಿನಲ್ಲಿ ಇಟನಾಳ ಗ್ರಾಮ ಪಂಚಾಯತ ನರೆಗಾ ಯೋಜನೆಯಡಿಯಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಅದರ ಜೊತೆಗೆ ಗ್ರಾಮಸ್ಥರು ದನ ಕರು ಕುರಿ ಮೇಕೆ ಮೇಯಿಸಿಕೊಂಡು ಸುಮಾರು ವರ್ಷಗಳಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಅದರಂತೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆಗಬೇಕೆಂದು ಜೊತೆಗೆ ಗ್ರಾಮದ ಜನರ ಆರೋಗ್ಯ ಹಿತ ದೃಷ್ಠಿಯಿಂದ ಇಲ್ಲಿ ಆಸ್ಪತ್ರೆ ಕೂಡಾ ನಿರ್ಮಾಣ ಆಗಬೇಕೆಂದು ಬೇಡಿಕೆ ಇದ್ದು,
ಹೀಗೆ ಇರುವಾಗ ಅಕ್ರಮವಾಗಿ ಎ.ಎಮ್.ಕಸಮಾ ಪೇಡರ ಲೇವರ ಸೋಲಾರ ಸಿಸ್ಟಮ್ ಯೋಜನೆ ಯಡಿಯಲ್ಲಿ ಸೌರ ಘಟಕವನ್ನು ನಿರ್ಮಿಸುತ್ತಿದ್ದಾರೆ ಇದನ್ನು ತೀರ್ವವಾಗಿ
ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇಟನಾಳ ಗ್ರಾಮದವರು ಸಹಿತ ಇದನ್ನು ಖಂಡಿಸುತ್ತಿದ್ದಾರೆ.
ಸದರಿ ಜಮೀನು ಗ್ರಾಮಕ್ಕೆ ಸಮೀಪವಿದ್ದು ಈ ಜನರ ಅನೂಕುಲಕ್ಕಾಗಿ ಇದ್ದು ಈ ಜಮೀನು ಈ ಊರಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಗ್ರಾಮಸ್ಥರಿಂದ ಸಂಪೂರ್ಣ ತಕರಾರವಿದ್ದು ತಕ್ಷಣ ಕರ್ನಾಟಕ ರಾಜ್ಯ ಸರ್ಕಾರ ಮತ್ತು ತಾಲೂಕಾ ಆಡಳಿತ ಯಾವುದೆ ಕಾರಣಕ್ಕು ಸೌರ ಘಟಕವನ್ನು ಅನುಮತಿ ನೀಡಬಾರದೆಂದು ಒತ್ತಾಯಿಸಿದರು.
ಒಂದು ವೇಳೆ ಅನುಮತಿ ನೀಡಿದರೆ ಗ್ರಾಮಸ್ತರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿಕೊಂಡು ತಾಲೂಕಾ ಆಡಳಿತ ಕಛೇರಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಎಂದು ತಹಶೀಲ್ದಾರ ರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿದ್ದಪ್ಪಾ ರಾಮಪ್ಪಾ ನಿಪ್ಪಾಣಿ,
ಮಾಳು ರಾಯಪ್ಪಾ ಚೌಗಲಾ,
ವಿಠ್ಠಲ ಅಪ್ಪರಾಯ ಸಿಂದೂರೆ,
ಕಾಶಪ್ಪಾ ಲಗಮಾ ಸಿಂದೂರೆ ಹಾಗೂ ಕರವೇ ತಾಲೂಕಾಧ್ಯಕ್ಷರಾದ ಸಂಜು ಬಡಿಗೇರ್ ಚಂದ್ರಕಾಂತ ಹುಕ್ಕೇರಿ ಕರವೇ ಕಾರ್ಯಕರ್ತರು ಉಪಸ್ಥಿರಿದ್ದರು.





