ಚಿಕ್ಕೋಡಿ :–
ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಬ್ಯಾಂಕ್ ಹೆಸರು ಹೇಳಿ ಸೈಬರ್ ಕಳವು ಪ್ರಕರಣ ಹೆಚ್ಚಾಗಿವೆ . ಸೈಬರ್ ಖದೀಮರು ಆಸೆ ಆಮೀಶ, ಸಂಚುಗಳಿಗೆ ಓಳಗಾಗದಿರಿ ಎಂದು ಕೆನರಾ ಬ್ಯಾಂಕ್ ಎ.ಜಿ.ಎಂ ಪ್ರಾದೇಶಿಕ ಮುಖ್ಯಸ್ಥ ಎಂ.ಪನಿಶಯನ ಹೇಳಿದರು.

ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಬಸವ ಪ್ರಭು. ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕೆನರಾ ಬ್ಯಾಂಕ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿಕ್ಕೋಡಿ ಸಹಯೋಗದೊಂದಿಗೆ ಬುಧವಾರ ನಡೆದ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರಕ್ಕೆ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು,ಕಳೆದು ಕೊಂಡವರಿಗೆ ಜೀವದ ಬೆಲೆ ಅನುಭವವಿರುತ್ತದೆ. ಆ ನಿಟ್ಟಿನಲ್ಲಿ ಎಲ್ಲರು ಸರಕಾರ ಹಾಗು ಬ್ಯಾಂಕ್ ಗಳಲ್ಲಿ ಲಭ್ಯ ವಿರುವ ಇನ್ಸೂರನ್ಸ್ ಮಾಡಿಸಿ ಬೃಹತ್ ಹಾನಿ ತಪ್ಪಿಸಿ .ಕೆನರಾ ಬ್ಯಾಂಕ್ ನಲ್ಲಿ ಹೆಣ್ಣುಮಕ್ಕಳಿಗೆ ಯಾವದೆ ಶುಲ್ಕವಿಲ್ಲದೆ ಕ್ಯಾನ್ಸರ್ ಚಿಕಿತ್ಸೆ ಇನ್ಸುರನ್ಸ್ ಲಾಭ ಪಡೆಯಬಹುದು.ನಿರ್ಜೀವ ವಸ್ತುಗಳ, ವಾಹನಗಳ ಇನ್ಸುರನ್ಸ್ ಗಳಿಗಿಂದ ಜೀವ ವಿರುವ ಮನುಷ್ಯ ಇನ್ಸುರನ್ಸ್ ಎಲ್ಲರ ಜವಾಬ್ದಾರಿ ಎಂದರು.ಕೆನರಾ ಬ್ಯಾಂಕ್ ಬೆಳೆದು ಬಂದ ದಾರಿ ಬಗ್ಗೆ ವಿವರಿಸಿದರು.

ಆರ್ ಬಿ ಆಯ್ ಮ್ಯಾನೆಜರ್ ಚೇತನಕುಮಾರ ಒತ್ತಡ, ಭಯಕ್ಕೆ, ಆಸೆ ಆಮೀಶ ಒಡ್ಡಿ ಸೈಬರ್ ಕಳ್ಳರು ವಂಚಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಂದಿನ ಸಮಾಜ ಎಚ್ಚರಿಕೆ ವಹಿಸಬೇಕಾಗಿದೆ.ಓಟಿಪಿ, ಸಿವಿವಿ ಯಾರೋಂದಿಗೂ ಹಂಚಿಕೊಳ್ಳದಿರಿ, ಅಪರಿಚಿತ ವ್ಯಕ್ತಿ ಗಳಿಂದ ಸಮಾಜಿಕ ಜಾಲತಾಣಗಳಲ್ಲಿ ಜಾಗರುಕರಾಗಿರಿ. ಬಸ್ ನಿಲ್ದಾನ, ರೈಲ್ವೆ ನಿಲ್ದಾನ ಸೇರಿ ಇತರೆ ಪ್ರೀ ವೈಪೈ ಆಮಿಶಕ್ಕೆ ಒಳಗಾಗದಿರಿ. ಸಾಮಾಜಿಕ ಜಾಲತಾನ ಮಾದ್ಯಮದಲ್ಲಿ ಕೆಂದ್ರ ಸರಕಾರದ ಅಧೀಕೃತ ವೆಬ್ ಸೈಟ್ ಗೆ ಬೇಟಿ ನೀಡಿ ಸೈಬರ್ ಅಪರಾದ ಬಗ್ಗೆ ಮಾಹಿತಿ ಪಡೆಯಿರಿ. ಸಾಮಾಜಿಕ ಜಾಲತಾಣದ ಸಣ್ಣ ನಿರ್ಧಾರ ಮನುಷ್ಯ ದಿಕ್ಕನ್ನು ಬದಲಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆ .ಎಲ್.ಇ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ದರ್ಶನ್ ಬಿಳ್ಳುರ ಇಂದಿನ ದಿನಗಳಲ್ಲಿ ಯುವ ಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುತ್ತಿದ್ದಾರೆ ಅವರಿಗೆ ಸೈಬರ್ ಅಪರಾಧ ಪ್ರಕರಣಗಳು ಕುರಿತು ಅರಿವು ಬೆಳೆಸಿಕೊಳ್ಳಬೇಕು ಹಾಗೂ ಹಣಕಾಸು ಹಂಚಿಕೆ ಮತ್ತು ಹೂಡಿಕೆ, ವಿಮೆ ಯೋಜನೆ ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಬಿ.ಕೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಆರ್ಥಿಕ ಭದ್ರತಾ ಜ್ಞಾನ ಭಾರತೀಯರಲ್ಲಿ ಹೆಚ್ಚಾಗಬೇಕು. ಸಾಲಮಾಡಿ ತಮ್ಮ ಆಸೆಗಳನ್ನು ಬೆನ್ನತ್ತುವದು ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಆರ್ಥಿಕ ಸಾಕ್ಷರತೆ ಹಾಗು ಆರ್ಥಿಕ ಒಳಗೊಳ್ಳುವಿಕೆ ಬಗ್ಗೆ ಬಗ್ಗೆ ಇಂದಿನ ಯುವಕರಲ್ಲಿ ಅರಿವು ಮೂಡಬೇಕಾಗಿದೆ ಎಂದರು.ಅವಶ್ಯಕತೆ ಮತ್ತು ಬೇಡಿಕೆ ವ್ಯತ್ಯಾಸ ಅರಿತು ಜೀವನ ಸಾಗಿಸಿದರೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕೋಡಿ ಘಟಕದ ಅಧ್ಯಕ್ಷ ರಾಜೇಂದ್ರ ಕೋಳಿ,ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಗೋಡಕೆ ಮಾತನಾಡಿದರು.ತೇಜಸ್ವಿನಿ, ಭೂಮಿಕಾ, ಅನುಶ್ರೀ ಪ್ರಾರ್ಥನಾಗೀತೆ ಹಾಡಿದರು, ಜಗದೀಶ್ ಮುಧೋಳ್, ಮಧು ಮುನಸೆ,ಹಾಗೂ ಅಚಲ ಮೋಹಿತೆ ನಿರೂಪಿಸಿದರು,ಅರವಿಂದ ಸ್ವಾಗತಿಸಿದರು,ತೇಜಸ್ವಿನಿ ದುಂಡಗೆ ವಂದಿಸಿದರು.
ಕೆನರಾ ಬ್ಯಾಂಕ್ ಲೀಡ ಮ್ಯಾನೇಜರ್. ಪ್ರಶಾಂತ್ ಘೋಡಕೆ ಮಾತನಾಡಿದರು. ಪದವಿ ಕಾಲೇಜು ಉಪ ಪ್ರಾಚಾರ್ಯ ಸುಧೀರ ಕೋಟಿವಾಲೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ , ಎಂ.ಸಿ. ಎ ಮುಖ್ಯಸ್ಥ ಪ್ರೊ. ಸುನೀಲ್ ಶಿಂಧೆ. ಎಂಬಿಎ ಮುಖ್ಯಸ್ಥ ಡಾ. ಸಂಜಯ್ ಹಣಗಂಡಿ, ಡಾ. ವಿನಾಯಕ ಮಂಜಲಪೂರ ಇದ್ದರು. ಪತ್ರಕರ್ತರು, ಕೇಂದ್ರ ಸರ್ಕಾರ ಬ್ಯಾಂಕ್ ಗಳ ಇನ್ಶುರನ್ಸ್ ಕಂಪನಿಗಳ ಪ್ರತಿನಿಧಿಗಳು, ಕೆ .ಎಲ್. ಇ ಅಂಗ ಸಂಸ್ಥೆಯ ಪ್ರಾಚಾರ್ಯರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪತ್ರಕರ್ತರಾದ, ಸುಭಾಷ ದಲಾಲ,ಸಂಜು ಕಾಂಬಳೆ,ಮಹಾದೇವ ಪೂಜೇರಿ. ಚಂದ್ರಶೇಖರ ಚಿನಕೇಕರ್, ಲೋಹಿತ ಸಿರೋಳ, ಸಂತೋಷ ಕಾಮತ, ಲಾಲಸಾಬ ತಟಗಾರ, ಡಿ.ಕೆ.ಉಪಾರ, ರಾಜು ಕೋಳಿ, ವಿಮಲಾ ಚಿನಕೇಕರ,ಸುಶಾಂತ ಜಮಖಂಡಿಕರ್,. ಕಾಶಿನಾಥ ಸುಳಕುಡೆ, ರವೀಂದ್ರ ಮಂಗಾವೆ ,ಅಮರ ಮಾನೆ,. ಅಜೀತ ಸುತಾರ,ವಿಷ್ಣು ಸಿಂಗಾಡೆ, ಅಜೀತ ಶೀಂಧೆ, ಉತ್ತಮ ಕಾಟ್ಕರ್, ಸುಧೀಂರ ಕುಂಭೋಜಕರ್, ಅಂಕುಶ ಶೀಂಧೆ, ಸದಾಶಿವ ಜಾಧವ, ಅನಿಲ ದಲಾಲ,ಸುನೀಲ ತರಾಳ, ಗುರು ಹೀರೆಮಠ, ತಾತ್ಯಾಸಾಹೇಬ ಕಾಮತ,ರಾಜು ಕೋಳಿ, ಮಹಾಂತೇಶ ಮಠಪತಿ ಹಾಗೂ ಅನಂತಹ ದೀಕ್ಷಿತ್ ಉಪಸ್ಥಿತರಿದ್ದರು.





