ಬೆಳಗಾವಿ :–
ಕರ್ನಾಟಕ ಸರ್ಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಳಗಾವಿ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಧರ್ಮಗಳ, ಹೆಣ್ಣು ಮಕ್ಕಳ ಸರಳ ವಿವಾಹಕ್ಕೆ, ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50,000 ರೂ ಗಳನ್ನು ನೀಡಲಾಗುವುದು.
ಈ ಅವಕಾಶವನ್ನು ಅಲ್ಪಸಂಖ್ಯಾತ ಸಮುದಾಯದವರು ಸದುಪಯೋಗ ಪಡೆದುಕೊಳ್ಳಿ.

ಸೌಲಭ್ಯದ ಪ್ರಯೋಜನ ಪಡೆಯಲು ಶರತ್ತುಗಳು
1) ಅರ್ಜಿ ಸಲ್ಲಿಸುವ ವಧು-ವರರು ಕರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು .
2) ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 05 ಜೋಡಿಗಳು ಭಾಗವಹಿಸಿರತಕ್ಕದ್ದು
3) ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18, ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21, ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು.
4) ವಧು-ವರರ ವಾರ್ಷಿಕ ಆದಾಯ ರೂ 2.50 ಲಕ್ಷ ಮತ್ತು ಇಬ್ಬರ ಒಟ್ಟು ಆದಾಯ 5 ಲಕ್ಷ ಮೀರುವಂತಿಲ್ಲ.
5) ವರನಿಗೆ ಈಗಾಗಲೇ ಜೀವಂತ ಪತ್ನಿ ಇದ್ದಲ್ಲಿ ಹಾಗೂ ವಧುವಿಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ.
ಅಲ್ಪಸಂಖ್ಯಾತರ ಸರಳ ವಿವಾಹ ಮದುವೆಗೆ ಬೇಕಾದ ದಾಖಲೆಗಳು
1) ವಧು-ವರರ ಆಧಾರ್ ಕಾರ್ಡ್ ( ಚಾಲ್ತಿ ಇರುವ ಮೊಬೈಲ್ ಸಂಖ್ಯೆ ಲಿಂಕ್ ಇರಬೇಕು)
2) ವಧು-ವರರ ಪಾಲಕರ ಆಧಾರ್ ಕಾರ್ಡ್ ( ತಂದೆ ತಾಯಿ).
3) ವಧು-ವರರ ಪಾಲಕರ ವಿಧವೆಯ /ಮರಣ ಪತ್ರ (ಇದ್ದಲ್ಲಿ).
4) ವಧು ವರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
5) ವಧು ವರರ ಬ್ಯಾಂಕ್ ಪಾಸ್ ಬುಕ್
6) ವಧು-ವರರ ಫೋಟೋ
7) ವಧು-ವರರ ರೇಷನ್ ಕಾರ್ಡ್
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಳಗಾವಿ ಇವರ ವತಿಯಿಂದ ಸರಳ ವಿವಾಹವನ್ನು ದಿ:14-12-2025 ರಂದು ಅಂಜುಮನ ಹಾಲ್ ಬೆಳಗಾವಿ ಇಲ್ಲಿ ಇಟ್ಟುಕೊಳ್ಳಲಾಗಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಸಿಖ್, ಬೌದ್ಧ ಹಾಗೂ ಪಾರ್ಸಿ ಜನಾಂಗದವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮುಖಾಂತರ ಕೋರಲಾಗಿದೆ.
10-12-2025ರ ಒಳಗಾಗಿ ಹೆಸರು ನೊಂದಾಯಿಸಲು ಈ ಮೂಲಕ ಸೂಚಿಸಿದೆ.
ಆಸಕ್ತರು ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿ
9964494147, 8660983967, 8431688831, 7406821143





