*ಉಪಲೋಕಾಯುಕ್ತರಿಂದ ಚಿಕ್ಕೋಡಿ ಪುರಸಭೆಗೆ ಅನೀರಿಕ್ಷಿತ ಭೇಟಿ*

ಚಿಕ್ಕೋಡಿ :–

ಚಿಕ್ಕೋಡಿ (ಕರ್ನಾಟಕ ವಾರ್ತೆ) ಸೆ.24: ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರಪ್ಪ ಅವರು ಗುರುವಾರ(ಸೆ.24)
ಚಿಕ್ಕೋಡಿಯ ಪುತಸಭೆಗೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಪುರಸಭೆಯ ಜನನ, ಮರಣ, ಇ-ಸತ್ತು, ಇ-ಖಾತಾ, ಬಿ-ಖಾತಾ ದಾಖಲೆಗಳು ಸೇರಿದಂತೆ‌ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕಚೇರಿಯ ಸಿಬ್ಬಂದಿಗಳ ಹಾಜರಾತಿ ವಹಿ, ವಿವಿಧ ಕಡತಗಳನ್ನು ಪರಿಶೀಲಿಸಿದರು. ಪಟ್ಟಣದ ಕಟ್ಟಡ ನಿರ್ಮಾಣ ಪರವಾನಿಗೆ, ತ್ಯಾಜ್ಯ ವಿಲೇವಾರಿ‌ ವಾಹನಗಳ‌ ವಿವರ,ಪಟ್ಟಣದಲ್ಲಿನ ಬೀದಿ ದೀಪಗಳ‌ ನಿರ್ವಹಣೆ ಹಾಗೂ ಅದಕ್ಕೆ ತಗಲುವ ವೆಚ್ಚದ ವಿವರ, ಹೊಸ ಬಡಾವಣೆಗಳಿಗೆ ಅನುಮತಿ ನೀಡಿದರ ವಿವರಗಳನ್ನು ಪಡೆದು ಕಚೇರಿಯ ಸಿಬ್ಬಂದಿಗಳ ಕಳೆದ ಎರಡು ವರ್ಷಗಳ ವೇತನ ವಿವರ ಒದಗಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದ ಅವರು ಪಟ್ಟಣದಲ್ಲಿ ಅತಿಕ್ರಮಣ, ನಿಯಮ ಬಾಹಿರ ಕಟ್ಟಡ ನಿರ್ಮಾಣದ ಕುರಿತು ಸಾರ್ವಜನಿಕರ ದೂರುಗಳಿದ್ದಲ್ಲಿ ನೇರವಾಗಿ ಲೋಕಾಯುಕ್ತಗೆ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಅರವಿಂದ, ಜಿಲ್ಲಾ‌ ಕಾನೂನು ಸೇವೆಗಳ‌ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಲೋಕಾಯುಕ್ತ ಎಸ್.ಪಿ. ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಎಸ್.ಎಸ್.ಸಂಪಗಾವಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವು ಬಂಗಾರಪ್ಪನವರ, ತಹಶೀಲ್ದಾರ ಆರ್.ಆರ್.ಬುರ್ಲಿ, ಮುಖ್ಯಾಧಿಕಾರಿ ಜಗದೀಶ ಈಟಿ ಉಪಸ್ಥಿತರಿದ್ದರು.

Share this post:

Leave a Reply

Your email address will not be published. Required fields are marked *

You cannot copy content of this page