ಮಹಿಳೆಯರಿಗೆ “ಶಕ್ತಿ” ಪ್ರಯಾಣ ಇನ್ನೂ ಅನಾಯಾಸ.. “ಆಧಾರ್” ಓರಿಜಿನಲ್ಲೇ ಬೇಕೆಂತಿಲ್ಲ… ಮೊಬೈಲ್‌ ನಲ್ಲಿ‌ ತೋರಿಸಿದ್ರೂ ಪರ್ವಾಗಿಲ್ಲ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಮತ್ತಷ್ಟು ಸ್ಮಾರ್ಟ್..ಸರಳ..ಪರಿಣಾಮಕಾರಿ ಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಪ್ರಯಾಣ ಮಾಡೊಕ್ಕೆ ಮಹಿಳೆಯರು ಒರಿಜಿನಲ್‌ ಆದ ದಾಖಲೆಯನ್ನೇ ತೋರಿಸಬೇಕೆಂದು ಸಾರಿಗೆ ಸಿಬ್ಬಂದಿ ಹಠ ಮಾಡುತ್ತಿದ್ದಾರೆನ್ನುವ ವ್ಯಾಪಕ ದೂರುಗಳ ಹಿನ್ನಲೆಯಲ್ಲಿ ಇನ್ಮುಂದೆ ದಾಖಲೆಗಳು ಕೈಲಿದ್ದರೆ ಮಾತ್ರ ದಾಖಲೆಗಳಲ್ಲ, ಮೊಬೈಲ್‌ ನಲ್ಲಿದ್ದರೂ ಅವನ್ನು ಪರಿಗಣಿಸಬೇಕೆಂದು ಅಧೀಕೃತವಾಗಿ ಆದೇಶ ಹೊರಡಿಸಿದ್ದಾರೆ.ಇದು ಮಹಿಳಾ ಪ್ರಯಾಣಿಕರಿಗಷ್ಟೇ ಅಲ್ಲ, ಕಂಡಕ್ಟರ್ಸ್‌ ಗೂ ಅನುಕೂಲವಾಗಲಿದೆ.

ಶಕ್ತಿ ಯೋಜನೆಯ ಸದುಪಯೋಗ ಎಲ್ಲರಿಗೂ ಸಿಗಬೇಕು.ಯೋಜನೆ ಫಲಾನುಭವಿಗಳಿಗೆ ಎಲ್ಲಿಯೂ ಅಸಮಾಧಾನ-ಅತೃಪ್ತಿ ಆಗಬಾರದು.ಸರ್ಕಾರದ ಬಗ್ಗೆ ಅಪಸ್ವರ ತೆಗೆಯಬಾರದು ಎಂಬ ಕಾರಣಕ್ಕೆ ಸರ್ಕಾರ ಏನೆಲ್ಲಾ ದಾಖಲೆಗಳು ಉಚಿತ ಪ್ರಯಾಣಕ್ಕೆ ಬೇಕೆನ್ನುವುದನ್ನು 11-11-2023 ರಂದೇ ತಿಳಿಸಿತ್ತು.ಅದಾದ ಹೊರತಾಗ್ಯೂ ಅನೇಕ ಬಸ್‌ ಗಳಲ್ಲಿ ದಾಖಲೆಗಳ ವಿಚಾರದಲ್ಲಿ ಸಾರಿಗೆ ಸಿಬ್ಬಂದಿ ಮತ್ತು ಮಹಿಳಾ ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಲೇ ಇತ್ತು.ಈ ಬಗ್ಗೆ ಈ ಕ್ಷಣಕ್ಕೂ ಅನೇಕ ದೂರುಗಳು ಕೇಳಿಬರುತ್ತಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಈ ಹಿನ್ನಲೆಯಲ್ಲೇ ಮತ್ತೊಮ್ಮೆ ಸರ್ಕಾರ ಹಾಗೂ ಸಾರಿಗೆ ನಿಗಮಗಳು ಸುತ್ತೋಲೆಯಲ್ಲಿರುವ ಸಂಗತಿಗಳನ್ನು ಪುನರ್‌ ಉಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದು ಮಹಿಳಾ ಪ್ರಯಾಣಿಕರು ತಮ್ಮ ಮೊಬೈಲ್‌ ನ ಡಿಜಿ ಲಾಕರ್‌ ಫೋಲ್ಡರ್‌ ನಲ್ಲಿ ಮೂಲ ದಾಖಲೆಗಳನ್ನು ಇಟ್ಟುಕೊಂಡು ಕಂಡಕ್ಟರ್‌ ಗೆ ತೋರಿಸಿದ್ರೆ ಅಷ್ಟೇ ಸಾಕು..ಆ ವಿಚಾರದಲ್ಲಿ ಕಂಡಕ್ಟರ್‌ ಕೂಡ ತಗಾದೆ ತೆಗೆಯುವಂತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಟಷ್ಟಪಡಿಸಿದೆ.

ಆದ್ದರಿಂದ ಇನ್ಮುಂದೆ ಕಂಡಕ್ಟರ್‌ ಗಳು ಕೂಡ ಒರಿಜಿನಲ್‌ ಆದ ದಾಖಲೆಗಳನ್ನೇ ತೋರಿಸಬೇಕೆಂದು ಮಹಿಳಾ ಪ್ರಯಾಣಿಕರನ್ನು ಒತ್ತಾಯಿಸುವಂತಿಲ್ಲ.ಟಿಕೆಟ್‌ ಇಶ್ಯೂ ಮಾಡುವ ಸನ್ನಿವೇಶದಲ್ಲಿ ಮಹಿಳಾ ಪ್ರಯಾಣಿಕರು ಅದನ್ನು ಪ್ರದರ್ಸಿಸಿದರೆ ಸಾಕು ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ.ಮಹಿಳೆಯರು ಕೂಡ ತಮಗೆ ಸಹಕಾರ ಕೊಟ್ಟರೆ ಯಾವುದೇ ಗೊಂದಲ ಸೃಷ್ಟಿಯಾಗೊಲ್ಲ ಎನ್ನುವುದು ಕೂಡ ಕಂಡಕ್ಟರ್‌ ಸಮುದಾಯದ ಅಭಿಪ್ರಾಯ.ಇದೆಲ್ಲಕ್ಕಿಂತ ಹೆಚ್ಚಾಗಿ ಚೆಕ್ಕಿಂಗ್‌ ನೆವದಲ್ಲಿ ಕಿಕ್ಕಿರಿದ ಬಸ್‌ ಗಳನ್ನು ಹತ್ತಿ ಎಲ್ಲಿಲ್ಲದ ಟಾರ್ಚರ್‌ ಕೊಡುವ ತನಿಖಾ ಸಿಬ್ಬಂದಿಯ ಕಾಟಕ್ಕೊಂದು ಮುಕ್ತಿ ದೊರಕಿಸಿಕೊಡಿ ಎನ್ನುವ ಸಾರಿಗೆ ಸಿಬ್ಬಂದಿಯ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ.

Leave a Reply

Your email address will not be published. Required fields are marked *

You cannot copy content of this page