“ಜಿಲ್ಲಾಡಳಿತ ಬೆಳಗಾವಿ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ತಾಲೂಕಾ ಸ್ವೀಪ್ ಸಮಿತಿ, ಚಿಕ್ಕೋಡಿ ರವರ ಸಹಯೋಗದಲ್ಲಿ ಚುನಾವಣಾ ಆಯೋಗದ ಆದೇಶದಂತೆ “ನಮ್ಮ ನಡೆ ಮತಗಟ್ಟೆಯ ಕಡೆಗೆ” ಕಾರ್ಯಕ್ರಮ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಜಿಲ್ಲಾಡಳಿತ ಬೆಳಗಾವಿ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ತಾಲೂಕಾ ಸ್ವೀಪ್ ಸಮಿತಿ, ಚಿಕ್ಕೋಡಿ ಹಾಗೂ ಪುರಸಭೆ ಚಿಕ್ಕೋಡಿ ರವರ್ ಸಹಯೋಗದಲ್ಲಿ

ಚುನಾವಣಾ ಆಯೋಗದ ಆದೇಶದಂತೆ “ನಮ್ಮ ನಡೆ ಮತಗಟ್ಟೆಯ ಕಡೆಗೆ” ಕಾರ್ಯಕ್ರಮ ನಿಮಿತ್ತ ದಿನಾಂಕ 30/04/2023 ರಂದು ಬೆಳಿಗ್ಗೆ 8 ಗಂಟೆಗೆ ರಾಜೀವ್ ನಗರ ಹುಡ್ಕೋ ಕಾಲೋನಿ ಅಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 219 ರಲ್ಲಿ (ಸಖಿ ಮತಗಟ್ಟೆ) ಮಾನ್ಯ ಚಿಕ್ಕೋಡಿ – ಸದಲಗಾ ವಿಧಾನಸಭಾ ಮತಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಮಾನ್ಯ ಉಪವಿಭಾಗಾಧಿಕಾರಿಗಳಾದ, ಶ್ರಿ ಮಾಧವ ಗಿತ್ತೇ, ರಾಷ್ಟ್ರೀಯ ಹಬ್ಬದ ವಾತಾವರಣದಡಿ ಪ್ರಜಾಪ್ರಭುತ್ವದ ಹಬ್ಬ ಮತದಾನ 10ನೆ ಮೇ, 2023 ದ್ಯೇಯ ಹೊಂದಿರುವ ವಿನ್ಯಾಸದ ಬಾವೂಟದ ದ್ವಜರೋಹಣ ಕಾರ್ಯಕ್ರಮ ನೆರವೇರಿಸಿದರು,

ಕಾರ್ಯಕ್ರಮದ ಭಾಗವಾಗಿ ಮತದಾರರ ಪ್ರತಿಜ್ಞಾ ವಿಧಿಯನ್ನು ಮತದಾರರಿಗೆ ಬೋಧಿಸಲಾಯಿತು, ಚುನಾವಣಾ ಗೀತೆ ಪ್ರಚುರ ಪಡಿಸಿ, ಕಾಲೇಜು ವಿದ್ಯಾರ್ಥಿಗಳಿಂದ ಚುನಾವಣೆಯ ಕುರಿತು ಕಿರು ನಾಟಕ ಪ್ರದರ್ಶನ, ಪ್ರಜಾಪ್ರಭುತ್ವ ಹಬ್ಬ ಮತದಾನ ಮೇ 10, 2023 ರಂದು ಎಂಬ ಧ್ಯೆಯವಾಖ್ಯದಡಿ ವಿಶೇಷವಾಗಿ ರಚಿಸಿದ ಚುನಾವಣಾ ದ್ವಜ, ಚುನಾವಣೆಯ ಮತದಾನದ ಜಾಗೃತಿ ಸ್ತಿಕ್ಕರ್ಸ್, ಬಿತ್ತಿಪತ್ರ ಬಿಡುಗಡೆ ಗೊಳಿಸಿದರು, ಮತದಾರರಿಗೆ voter’s slip ವಿತರಿಸಿದರು ಚುನಾವಣಾಧಿಕಾರಿಗಳು ಮಾತನಾಡಿ

ಯಾವುದೇ ಆಮಿಷಕ್ಕೆ ಒಳಗಾಗದೆ ಹೆಚ್ಚಿನ ಪ್ರತಿಷತಃ ಮತದಾನ ಮಾಡಲು ನೆರೆದಿರುವ ಮತದಾರರಿಗೆ ಕರೆ ನೀಡಿದರು, ನಂತರ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದರಲ್ಲಿ ಪುರಸಭೆಯು ತ್ಯಾಜ್ಯ ಸಂಗ್ರಹಣೆಯ ವಾಹನದ ಮೂಲಕ ಚುನಾವಣೆಯ ಮತದಾನದ ಜಾಗೃತಿ ಮೂಡಿಸುವ ಗೀತೆಗಳನ್ನು ಪ್ರಚುರಪಡಿಸುವುದರೊಂದಿಗೆ, ಜಾಗೃತಿ ಫಲಕಗಳೊಂದಿಗೆ ಮನೆ ಮನೆಗೆ ತೆರಳಿ ಮತದಾರರಿಗೆ ಜಾಗೃತಿ ಮೂಡಿಸುವ ಬಿತ್ತಿ ಪತ್ರ ನೀಡಿ ಮತದಾರರನ್ನು ಕಡ್ಡಾಯವಾಗಿ ಮತದಾನ ಮಾಡಲು ಪ್ರೇರೇಪಿಸಿದರು.

ನಂತರ ಹೊಸಪೇಟೆ ಗಲ್ಲಿಯ ಸರಕಾರಿ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 227&228 ರಲ್ಲಿ ಕೂಡಾ ಪೌರಕಾರ್ಮಿಕರು ಹಾಗೂ ಮತಗಟ್ಟೆ ಅಧಿಕಾರಿಗಳಿಂದ ದ್ವಜಾರೋಹಣ ಮಾಡಲಾಯಿತು, ಸದರಿ ಕಾರ್ಯಕ್ರಮದಲ್ಲಿ ತಹಶೀಲ್ದಾರರು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ, ಶ್ರಿ ಸಿ ಎಸ್ ಕುಲಕರ್ಣಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಸ್ವೀಪ್ ಅಧಿಕಾರಿಗಳು ಶ್ರೀ ನಿಂಗಪ್ಪ ಮಸಳಿ, ಪುರಸಭೆಯ ಮುಖ್ಯಾಧಿಕಾರಿಗಳಾದ, ಶ್ರೀ ಮಹಾಂತೇಶ ನಿಡವಣಿ, MCC ನೋಡಲ್ ಅಧಿಕಾರಿಗಳು ಶ್ರೀ ತಂಗಡಿ, ತಾಲೂಕಾ ಆರೋಗ್ಯಾಧಿಕಾರಿಗಳು ದಾಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳು, FST ತಂಡದವರು, BLO ಗಳು, ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು , ಸಿಡಿಪಿಒ ಶ್ರೀಮತಿ ಭಾರತಿ ಕಾಂಬ್ಳೆ ರವರು, ಹಾಗೂ ಚಿಕ್ಕೊಡಿ ಪಟ್ಟಣದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು, ಮತದಾರರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours