“ರಾಜ್ಯದ ಸರ್ವತೋಮುಖ ಪ್ರಗತಿಗೆ ಭದ್ರ ಬುನಾದಿ ಈ ಸಾಲಿನ ಬಜೆಟ್”- ಶಾಸಕ ಗಣೇಶ್,ಪ್ರಕಾಶ ಹುಕ್ಕೇರಿ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–
ಕರ್ನಾಟಕದ ಇತಿಹಾಸದಲ್ಲಿ ದಾಖಲೆಯ 14ನೇ ಬಾರಿ ಜನಮೆಚ್ಚುಗೆಯ ಬಜೆಟ್ ಮಂಡಿಸಿದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ನಾಡಿನ ಜನರ ಪರವಾಗಿ ಮೊದಲಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

2023-24ನೇ ಸಾಲಿನ ಬಜೆಟ್ ಪೂರ್ಣ ಪ್ರಮಾಣದ ಆಯವ್ಯಯವಾಗಿದ್ದು,ಎಲ್ಲ ವಲಯಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲದಕ್ಕೂ ನ್ಯಾಯ ಒದಗಿಸುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆ.ನಮ್ಮ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ.

ರೈತರ ಕಲ್ಯಾಣಕ್ಕಾಗಿ 100 ಕೋಟಿ ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಮರುಜಾರಿ, ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲದ ಮಿತಿಯನ್ನು 3 ರಿಂದ 5 ಲಕ್ಷ ರೂ.ಗೆ ಏರಿಸಿರುವುದು ಹಾಗೂ ಕೃಷಿ ನವೋದ್ಯಮ ಯೋಜನೆಗೆ 10 ಕೋಟಿ ರೂ.ಸೇರಿದಂತೆ ಇನ್ನೂ ಹಲವು ಉಪಯುಕ್ತ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು,ಕಾಂಗ್ರೆಸ್ ಸರ್ಕಾರ ದೇಶದ ಬೆನ್ನೆಲುಬಾದ ರೈತರ ಪರವಾಗಿ ಸದಾ ಇರಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಜನೋಪಯೋಗಿ,ಪ್ರಗತಿಪರ, ಜನಸ್ನೇಹಿ ಆಗಿರುವ ಈ ಬಜೆಟ್ ನಿಜಕ್ಕೂ ರಾಜ್ಯವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುವುದು ನಿಶ್ಚಿತವಾಗಿದೆ.

“ಸಮಗ್ರ ಅಭಿವೃದ್ಧಿ ದೃಷ್ಟಿಯ ಪರಿಪೂರ್ಣ ಬಜೆಟ್” : ಪ್ರಕಾಶ್ ಹುಕ್ಕೇರಿ

ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 14ನೇ ಬಾರಿ ಎಲ್ಲರೂ ಮೆಚ್ಚುವಂತ ಬಜೆಟ್ ಮಂಡಿಸಿದ್ದು, ಅವರಿಗೆ ಅಭಿನಂದನೆಗಳು.

ಈ ಸಾಲಿನ ಬಜೆಟ್​ನಲ್ಲಿ ಜನಕಲ್ಯಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರು,ಕಾರ್ಮಿಕರು, ಮಹಿಳೆಯರು,ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ನ್ಯಾಯ ಒದಗಿಸಲಾಗಿದೆ.ಎಲ್ಲ ವರ್ಗದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದ್ದು,ರಾಜ್ಯವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.


Share with Your friends

You May Also Like

More From Author

+ There are no comments

Add yours