“ನದಿ ತೀರದ ಸದಲಗಾ, ಶಮನೆವಾಡಿ,ಜನವಾಡ ಗ್ರಾಮಗಳಿಗೆ ಶಾಸಕ ಗಣೇಶ ಹುಕ್ಕೇರಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ನದಿ ತೀರದ ಗ್ರಾಮಗಳಿಗೆ ಶಾಸಕರ ಭೇಟಿ – ಪರಿಶೀಲನೆ

ನದಿ ತೀರದ ತಾಲುಕಿನ ಸದಲಗಾ, ಶಮನೆವಾಡಿ ಹಾಗೂ ಜನವಾಡ ಗ್ರಾಮಗಳಿಗೆ ಶಾಸಕ ಗಣೇಶ ಹುಕ್ಕೇರಿ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಪಶ್ಚಿಮ ಘಟ್ಟದಲ್ಲಿ ಭಾರಿ ಪ್ರಮಾಣದ ಮಳೆ ಬೀಳುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೆಳ ಹಂತದ ಬಹುತೇಕ ಸೇತುವೆಗಳು ಮುಳುಗಡೆಯಾಗಿದ್ದು, ನದಿ ತೀರದ ಪ್ರದೇಶಗಳಿಗೆ ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರು ತಾಲೂಕಾಧಿಕಾರಿಗಳೊಂದಿಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರೀಶೀಲಿಸಿದರು.

ಈ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ಶಾಸಕರು ನದಿ ಪಾತ್ರದ ಜನರು ಭಯ ಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವೀದ್ದೇವೆ. ನಾನು ಮತ್ತು ನಮ್ಮ ನಾಯಕರಾದ ಪ್ರಕಾಶಣ್ಣಾ ಹುಕ್ಕೇರಿ ಅವರು ಸಂಭದಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ, ಅಧಿಕಾರಿಗಳು ಕ್ಷಣಕ್ಷಣವೂ ತಮ್ಮ ಸುರಕ್ಷತೆ ಹಾಗೂ ರಕ್ಷಣೆ ಬಗ್ಗೆ ಗಮನಹರಿಸುತ್ತಿದ್ದು ತಾವೂ ಸಹ ಜಾಗರುರಕತೆ ವಹಿಸಬೇಕೆಂದು ಹೇಳಿದರು.

ಹಾಗೂ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡು ನದಿ ಪಾತ್ರದ ಜನರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚಿಸಿದರು.

ಈ ಸಂಧರ್ಭದಲ್ಲಿ ಚಿಕ್ಕೋಡಿ ತಹಸೀಲ್ದಾರರಾದ, ಸಿ ಎಸ್ ಕುಲಕರ್ಣಿ ಅವರು, ಸದಲಗಾ ಠಾಣೆಯ ಪಿ ಎಸ್ ಐ ಬಿರಾದಾರ, ಪುರಸಭೆ ಸದಸ್ಯರು, ಸಂತೋಷ ನವಲೆ, ಭೀಮಾ ಮಾಳಗೆ, ಪಿರಗೌಡ ಪಾಟೀಲ, ಸತೀಶ ಪಾಟೀಲ, ಉದಯ ಬದನೆಕಾಯಿ, ಉದಯ ಪಾಟೀಲ, ಮಹಾವೀರ ಉದಗಾಂವೆ, ನಿಂಗಪ್ಪ ಸನದಿ, ರಾಮಾ ಮಾರಾಪುರೆ, ರಾಯಪ್ಪ , ಭರತ ಬದನೆಕಾಯಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours