“ವಡ್ರಾಳದಲ್ಲಿ ಶ್ರೀ ಕೃಷ್ಣ ಪಾರಿಜಾತ ಪ್ರರ್ದಶನ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಶ್ರೀ ಕೃಷ್ಣ ಪರಮಾತ್ಮನು ಅಸತ್ಯವನ್ನು ದೂರ ಮಾಡಲು ಸತ್ಯದ ಕಡೆಗೆ ಸಾರಥಿಯಾಗಿ ಮಹಾಭಾರತದ ಕಥೆಗೆ ನಾಂದಿ ಹಾಡಿದವರು ಆ ನಿಟ್ಟಿನಲ್ಲಿ  ಎಲ್ಲ ಮನುಜಕೂಲಕ್ಕೆ ಧರ್ಮನೀನು ರಕ್ಷಿಸಿದರೆ ನಿನ್ನ ಧರ್ಮ ರಕ್ಷಿಸುತ್ತದೆ ಬೋದನೆ ಮಾಡಿ ಶ್ರೀಕೃಷ್ಣ ಈ ನಾಡಿಗೆ ಬೆಳಕಾದವರು ಎಂದು ನಿವೃತ ಆಯ್.ಎ.ಎಸ್‌ ಅಧಿಕಾರಿ ಶಂಭೂ ಕ್ರೀ ಕಲ್ಲೋಳಕರ ಅಭಿವ್ಯಕ್ತ ಪಡಿಸಿದರು ಅವರು ಚಿಕ್ಕೋಡಿ ಸಮೀಪದ ವಡ್ರಾಳ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಹಕಾರದಲ್ಲಿ ಕಳೆದ ದಿನಾಂಕ 07-09-2023 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಆಯೋಜಿಸಿದ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನಕ್ಕೆ ವಾದ್ಯನುಡಿಸಿ ಚಾಲನೆ ನೀಡಿ ಮಾತನಾಡಿ ಜಾನಪದ ರಂಗಭೂಮಿ ಕಲೆಗಳು ಪುರಾತನದಿಂದ ಬಂದಿದ್ದು ಉತ್ತರ ಕರ್ನಾಟಕದ ಪಾರಿಜಾತ ಕಲೆ ನಶಿಸಿ ಹೊಗದಂತೆ ಕಲೆಗಳನ್ನು ಎಲ್ಲರು ಪೋತ್ರಾಹ್ಸನೀಡಿ ಬೆಳೆಸಬೆಕೆಂದರು. 

   ಯುವ ಧುರೀಣರಾದ ರುದ್ರಪ್ಪಾ ಸಂಗಪ್ಪಗೋಳ ಇವರು ಮಾತನಾಡಿ ಇಂದಿನ ದಿನಮಾನದಲ್ಲಿ  ಅಶ್ಲೀಲ ಕಲೆಗಳಿಗೆ ಮಾರುಹೋಗದೆ ನಮ್ಮ ಪರಂಪರೆ ಹಳ್ಳಿಯ ನಾಟಕ ಬಯಲಾಟ ಪಾರಿಜಾತ ಕಲೆಗಳು ಮಹಾತ್ಮರ ಜಯಂತಿ ಹಬ್ಬಹರಿ ದಿನಗಳಿಗೆ ಮೆರಗು ನೀಡುತ್ತವೆ ಎಂದರು. ದಿವ್ಯ ಸಾನಿಧ್ಯವನ್ನು ಪ.ಪೂ ಶ್ರೀ ಸಿದ್ದಣ್ಣಾ ಮಹಾರಾಜರು ರಾಯಚೂರ ವಹಿಸಿದರು   ಸಮಾರಂಭದ ಅಧ್ಯಕ್ಷತೆಯನ್ನು ಈರಗೌಡಾ ಧು ಪಾಟೀಲ ವಹಿಸಿದರು ವೇದಿಕೆ ಮೇಲೆ ಅಶೋಕ ಪಿ ಪಾಟೀಲ, ನಾನಾಸಾಹೇಬ ಪಾಟೀಲ, ಭರತ ಕಲಾಚಂದ್ರ  ಉಪಸ್ಥಿತರಿದ್ದರು.  ಪ್ರಾಸ್ತಾವಿಕವಾಗಿ ಸಂಘಟಕರಾದ ಬಸವಪ್ರಭು ಕುಂಡ್ರಕು ಮಾತನಾಡಿದರು ಶಿಕ್ಷಕರಾದ ರಾಮಪ್ಪಾ ಮದ್ಯಾಳ್ಳಿ ಸ್ವಾಗತಿಸಿ ವಂದಿಸಿದರು. ನಂತರ ಬೆಳಗಾವಿ ಜಿಲ್ಲೆಯ ವಿವಿಧ ಪ್ರಖ್ಯಾತ ಕಲಾವಿದರು ಶ್ರೀ ಕೃಷ್ಣ ಪಾರಿಜಾತ ಕಲಾಪ್ರದರ್ಶನ ನೀಡಿ ನೆರೆದ ಭಕ್ತ ಸಮೂಹಕ್ಕೆ ಕಲಾರಸದೌತನ ನೀಡಿದರು. 

ಹಿರಿಯ ಕಲಾವಿದ ಬಸವಪ್ರಭು ಕುಂಡ್ರಕು ಇವರಿಗೆ ಸನ್ಮಾನ

ಚಿಕ್ಕೋಡಿ:  ಚಿಕ್ಕೋಡಿ ಸಮೀಪದ ವಡ್ರಾಳ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಕಳೆದ ದಿನಾಂಕ 07-09-2023 ರಂದು ಆಯೋಜಿಸಿದ ಶ್ರೀ ಕೃಷ್ಣ ಪಾರಿಜಾತದಲ್ಲಿ ಶ್ರೀ ಕೃಷ್ಣ ಪಾತ್ರ ನಿರ್ವಹಿಸಿದ ಹಿರಿಯ ಕಲಾವಿದರಾದ ಬಸವಪ್ರಭು ಕುಂಡ್ರಕು ಇವರಿಗೆ ಶ್ರೀ ಶ್ರೋ.ಬ್ರ.ನಿ ಬಸವಪ್ರಭು ಮಹಾರಾಜರು ಚಿಂಚಣಿ-ಮಜಲಟ್ಟಿ ಇವರು ಶಾಲು ಹೊದಿಸಿ ಮಾಲಾರ್ಪಣೆಯೊಂದಿಗೆ ಸನ್ಮಾನಿಸಿದರು.   


Share with Your friends

You May Also Like

More From Author

+ There are no comments

Add yours