“ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ” – ಶಶಿಕಲಾ ಜೊಲ್ಲೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಮೇ. ೭ ರಂದು ನಡೆಯುವ ಲೋಕಸಭೆ ಚುನಾವಣೆ ಭವಿಷ್ಯದ ಚುನಾವಣೆಯಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರ ರಚನೆಗೆ ಪ್ರತಿಯೊಬ್ಬರು ಬಿಜೆಪಿ ಬೆಂಬಲಿಸಬೇಕೆAದು ನಿಪ್ಪಾಣ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಶನಿವಾರ ಸಂಜೆ ತಾಲೂಕಿನ ಕರೋಶಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪ್ರತಿ ಮನೆ ಮನೆಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕೆಂದರು.
ದೇಶದ ರಾಷ್ಟ್ರೀಯ ಹೆದ್ಸಾರಿಗಳು, ರೈಲು,ಮೆಟ್ರೋ, ರೈತರಿಗೆ ಕಿಸಾನ ಸಮ್ಮಾನ,ಆಯುಷ್ಮಾನ. ಉಚಿತ ಗ್ಯಾಸ ಹೀಗೆ ಅನೇಕ ಯೋಜನೆಗಳು ಜಾರಿಯಾಗಿವೆ. ದೇಶದ ಸುರಕ್ಷತೆಗಾಗಿ ಬಿಜೆಪಿ ಸರಕಾರ ಮೊದಲ ಆಧ್ಯತೆ ನೀಡಿದೆ. ಮುಂದಿನ ಐದು ವರ್ಷದಲ್ಲಿ ದೇಶದ ಮತ್ತಷ್ಟು ಅಭಿವೃದ್ಧಿ ಮಾಡಲು ಬಿಜೆಪಿ ಸರಕಾರ ಜಾರಿಯಾಗಲು ಎಲ್ಲರೂ ಬಿಜೆಪಿ ಬೆಂಬಲಿಸಬೇಕೆAದರು.
ಯುವ ಮುಖಂಡ ಅರುಣ ಐಹೊಳೆ ಮಾತನಾಡಿ, ನಮ್ಮ ತಂದೆಯವರನ್ನು ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆ ಮಾಡಿದ ಕರೋಶಿ ಗ್ರಾಮದ ಋಣ ಹೆಚ್ಚು ಇದೆ. ಎಲ್ಲರೂ ಬಿಜೆಪಿ ಬೆಂಬಲಿಸಿ ಜೊಲ್ಲೆ ಅವರನ್ನು ಆಯ್ಕೆ ಮಾಡಬೇಕೆಂದರು.
ವಿಜಯ ಕೋಟಿವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಬಾಗ ಮಂಡಳ ಅಧ್ಯಕ್ಷ ಪ್ರತ್ವಿರಾಜ ಜಾಧವ, ಎಲ್.ಬಿ.ಚೌಗಲಾ, ಅಭಯ ಮಾನವಿ, ಅಶೋಕ ಹರಗಾಪೂರೆ, ಶಿವಾನಂದ ನೊಗಿನಾಳ, ಪಂಚಾಕ್ಷರಿ ಹಳಿಜೋಳೆ, ವಾಸುದೇವ ಕುಲಕಣ ð,ಪ್ರಭು ಡಬ್ಬನ್ನವರ, ಗುರು ನಿರ್ವಾಣ , ಈರಗೌಡ ಪಾಟೀಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜು ಹರಗಣ್ಣವರ ಸ್ವಾಗತಿಸಿ,ನಿರೂಪಿಸಿ ವಂದಿಸಿದರು.
ವಿಜಯವಾಣ ಚಿತ್ರ
೨೦ಸಿಕೆಡಿ೫
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪ್ರಚಾರ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು.
ವಿಜಯ ಕೋಟಿವಾಲೆ,ಅರುಣ ಐಹೊಳೆ, ಪ್ರತ್ವಿರಾಜ ಜಾಧವ, ಎಲ್.ಬಿ.ಚೌಗಲಾ, ಅಭಯ ಮಾನವಿ ಉಪಸ್ಥಿತರಿದ್ದರು.


Share with Your friends

You May Also Like

More From Author

+ There are no comments

Add yours